ನವದೆಹಲಿ: ‘ರೈತರ ವಿಚಾರವನ್ನು ನಾನು ಪ್ರಸ್ತಾಪಿಸಿದಾಗಲೆಲ್ಲವೂ ಧನಕರ್ ಅವರು ನಿರ್ಲಕ್ಷಿಸುತ್ತಿದ್ದರು’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಪುಣ್ಯತಿಥಿ ಅಂಗವಾಗಿ ಇತ್ತೀಚಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರ ಜೊತೆ ಮಾತನಾಡಿದ್ದ ಉಪರಾಷ್ಟ್ರಪತಿ ಜಗದೀಪ ಧನ್‌ಕರ್, ‘ವಿಕಸಿತ ಭಾರತ ಎಂಬುದು ದೇಶದ ಆರ್ಥಿಕತೆಯ ರ‍್ಯಾಂಕ್ ಅಲ್ಲ, ವಾಸ್ತವದಲ್ಲಿ ಜನರ ಆದಾಯ ಎಂಟು ಪಟ್ಟು ಹೆಚ್ಚಾಗುವಂತೆ ನೋಡಿಕೊಳ್ಳಬೇಕು’ ಎಂದಿದ್ದರು.
‘ಇದು ಸಂಭವಿಸಬೇಕಾದರೆ, ರೈತರು ದೂರದೃಷ್ಟಿ ಹೊಂದಿರಬೇಕು. ಈಗ ನಮ್ಮ ರೈತರು ಕೇವಲ ಉತ್ಪಾದನೆಗಷ್ಟೇ ಗಮನಕೊಡುತ್ತಾರೆ. ನನ್ನ ಕಳಕಳಿಯೆಂದರೆ, ನನ್ನ ಎಲ್ಲ ರೈತ ಸಹೋದರರು ಕೃಷಿ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದ ದೇಶದ ಅತೀ ದೊಡ್ಡ ವ್ಯವಹಾರವಾದಯಲ್ಲಿ ಹೆಚ್ಚಿಸಿಕೊಳ್ಳುವ ಸಮಯ ಇದಾಗಿದೆ’ ಎಂದು ಹೇಳಿದ್ದರು.
ಧನಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಮೇಶ್, ‘ಧನ್‌ಕರ್ ಅವರು ವಿಕಸಿತ ಭಾರತದ ಕುರಿತಂತೆ ಸಮಯೋಚಿತ ಹಾಗೂ ಬುದ್ಧಿವಂತಿಕೆಯಿಂದ ಸೂಕ್ತವಾದ ಪದಗಳನ್ನು ಆಡಿದ್ದಾರೆ. ಆದರೆ, ಘೋಷಣೆಗಳನ್ನು ಕೂಗುವವರ ಮಾತುಗಳನ್ನು ಗಂಭೀರವಾಗಿ ಆಲಿಸಬೇಕು. ನಾಟಕೀಯತೆಯನ್ನೇ ಆಡಳಿತ ಎಂದು ಭಾವಿಸುವವರ ಸಿನಿಮಾ ಡೈಲಾಗ್‌ಗಳ ಬಗ್ಗೆ ಎಚ್ಚರವಹಿಸಬೇಕು’ ಎಂದು ತಿಳಿಸಿದ್ದಾರೆ.
‘ಬೇಸರದ ವಿಚಾರವೆಂದರೆ, ರೈತರ ಸಂಕಷ್ಟಗಳ ಕುರಿತು ಧ್ವನಿಯೆತ್ತಿದ್ದರೆ, ಅವರು (ಧನಕರ್) ನಿರ್ಲಕ್ಷ್ಯ ವಹಿಸುತ್ತಾರೆ ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.