ADVERTISEMENT

ಪಿಒಕೆಯಲ್ಲಿ ಕ್ಷಿಪಣಿ ಉಡಾವಣಾ ಕೇಂದ್ರದ ಸೂಚನೆಯಿಲ್ಲ: ಬಿ.ಎಸ್‌.ರಾಜು

ಪಿಟಿಐ
Published 10 ಅಕ್ಟೋಬರ್ 2020, 15:53 IST
Last Updated 10 ಅಕ್ಟೋಬರ್ 2020, 15:53 IST
ಬಿ.ಎಸ್‌.ರಾಜು
ಬಿ.ಎಸ್‌.ರಾಜು   

ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕ್ಷಿಪಣಿಗಳ ಉಡಾವಣಾ ಕೇಂದ್ರಗಳ ನಿರ್ಮಾಣಕ್ಕೆ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡುತ್ತಿದೆ ಎನ್ನುವ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಸೇನಾ ಕಮಾಂಡರ್‌ ಒಬ್ಬರು, ಈ ರೀತಿಯ ತಾಂತ್ರಿಕ ಸಹಾಯದಕುರಿತು ಯಾವುದೇ ಸೂಚನೆ ಇಲ್ಲ ಎಂದಿದ್ದಾರೆ.

‘ರಕ್ಷಣಾ ಸಾಮಾಗ್ರಿಗಳ ವಿಚಾರದಲ್ಲಿ ಪಾಕಿಸ್ತಾನ ಮತ್ತು ಚೀನಾ ನಡುವೆ ಸೇನಾ ಸಹಕಾರವಿದೆ’ ಎಂದುಶ್ರೀನಗರ ಮೂಲದ ಚಿನಾರ್‌ ಕಾರ್ಪ್ಸ್‌ನ ಲೆ.ಜನರಲ್‌ ಬಿ.ಎಸ್‌.ರಾಜು ಅವರು ತಿಳಿಸಿದ್ದಾರೆ.

ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟು ಮುಂದುವರಿದಿರುವ ಸಂದರ್ಭದಲ್ಲೇ, ಪಿಒಕೆಯಲ್ಲಿ ಕ್ಷಿಪಣಿ ಉಡಾವಣಾ ಕೇಂದ್ರಗಳ ನಿರ್ಮಾಣ ಹಾಗೂ ಕ್ಷಿಪಣಿಗಳ ಅಳವಡಿಕೆಗೆಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡುತ್ತಿದ್ದು, ಈ ಭಾಗದಲ್ಲಿ ಎರಡೂ ಸೇನೆಯ ಯೋಧರು ಜಂಟಿಯಾಗಿ ಗಸ್ತುತಿರುಗುತ್ತಿದ್ದಾರೆ ಎನ್ನುವ ಗುಪ್ತಚರ ಮಾಹಿತಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.

ADVERTISEMENT

‘ಮಾಧ್ಯಮಗಳಲ್ಲಿ ಈ ವರದಿಯನ್ನು ಗಮನಿಸಿದ್ದೇನೆ. ಉಭಯ ದೇಶಗಳಲ್ಲಿ ಯಾವುದು ಯಾರಿಗೆ ಸಹಾಯ ಮಾಡುತ್ತಿದೆಯೋ ಎನ್ನುವ ಸೂಚನೆ ಇಲ್ಲ. ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌(ಸಿಪಿಇಸಿ) ಕಾರಣ ಈ ಭಾಗದಲ್ಲಿ ಉಭಯ ದೇಶಗಳ ಯೋಧರು ಉಪಸ್ಥಿತರಿದ್ದಾರೆ. ಎರಡೂ ದೇಶಗಳ ನಡುವೆ ರಕ್ಷಣಾ ಸಾಮಾಗ್ರಿಗಳ ಖರೀದಿ ವಿಚಾರದಲ್ಲಿ ಸಹಕಾರವಿದೆ. ಆದರೆ ಯಾವುದೇ ತಾಂತ್ರಿಕ, ಯುದ್ಧತಂತ್ರದ ಸಹಾಯವು ಗೋಚರಿಸುತ್ತಿಲ್ಲ’ ಎಂದು ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.