ADVERTISEMENT

ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ತಡವಾಗುತ್ತಿದೆ ಏಕೆ? ಕಾಂಗ್ರೆಸ್ ಕಾರಣ ನಿಜವೇ?

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 3:46 IST
Last Updated 7 ಮಾರ್ಚ್ 2019, 3:46 IST
ಚೆನ್ನೈನಲ್ಲಿ ಬುಧವಾರ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಿನ್ನದ ಗದೆ ಕೊಟ್ಟು ಅಭಿನಂದಿಸಿದರು.
ಚೆನ್ನೈನಲ್ಲಿ ಬುಧವಾರ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಿನ್ನದ ಗದೆ ಕೊಟ್ಟು ಅಭಿನಂದಿಸಿದರು.   

ನವದೆಹಲಿ: ‘ಲೋಕಸಭೆ ಚುನಾವಣೆಯದಿನಾಂಕ ಘೋಷಿಸಲು ಸಾಕಷ್ಟು ಸಮಯವಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗದ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿವೆ’ ಎಂದು ಚುನಾವಣಾ ಆಯೋಗದಲ್ಲಿರುವ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

‘ಇದೀಗ ನಮ್ಮ ಪ್ರಧಾನಿ ಚುರುಕಾಗಿ ದೇಶ ಸುತ್ತುತ್ತಿದ್ದಾರೆ. ಅಧಿಕಾರ ಅವಧಿಯ ಕೊನೆಯ ಕ್ಷಣದಲ್ಲಿ ಹೊಸಹೊಸ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. ಚುನಾವಣೆಯ ದಿನಾಂಕ ಘೋಷಿಸಲು ಆಯೋಗವುಪ್ರಧಾನಿಯ ಅಧಿಕೃತ ಪ್ರವಾಸ ಪಟ್ಟಿಗಾಗಿ ಕಾಯುತ್ತಿದೆಯೇ’ಎಂದು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮಾರ್ಚ್ 4ರಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಅಹ್ಮದ್ ಪಟೇಲ್ ತಮ್ಮ ಹೇಳಿಕೆಯನ್ನುಟ್ವೀಟ್ ಮಾಡಿದ ದಿನಾಂಕಮಾರ್ಚ್ 4 ಎನ್ನುವುದು ಗಮನಾರ್ಹ. ಏಕೆಂದರೆ ಐದು ವರ್ಷಗಳ ಹಿಂದೆ ಅಂದರೆ2014ರ ಮಾರ್ಚ್ 5ರಂದು ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಘೋಷಿಸಿತ್ತು. ಈ ದಿನಾಂಕಕ್ಕೆ ಒಂದು ದಿನ ಮೊದಲು ಅಹ್ಮದ್ ಪಟೇಲ್ ಟ್ವೀಟ್ ಹೊರಬಿದ್ದಿದೆ. ಇದೇಕಾರಣಕ್ಕೆ ಟ್ವೀಟ್ ಮಹತ್ವ ಪಡೆದಿತ್ತು.

ADVERTISEMENT

ಚುನಾವಣೆ ದಿನಾಂಕ ಘೋಷಣೆ ತಡವಾಗಿರುವ ಕುರಿತುಎನ್‌ಡಿಟಿವಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಚುನಾವಣಾ ಆಯೋಗದ ಹೆಸರು ಹೇಳಲು ಇಚ್ಛಿಸದಹಿರಿಯ ಅಧಿಕಾರಿ,‘ನಾವು ಪ್ರಧಾನಿಯ ಕಾರ್ಯಚಟುವಟಿಕೆ ಮತ್ತು ಯೋಜನೆಗಳಿಗೆ ಅನುಗುಣವಾಗಿ ಕೆಲಸ ಮಾಡುವುದಿಲ್ಲ. ಈ ವಿಷಯವನ್ನು ಎಲ್ಲ ರಾಜಕೀಯ ಪಕ್ಷಗಳೂ ಅರಿತುಕೊಳ್ಳಬೇಕು’ ಎಂದು ಸ್ಪಷ್ಟಪಡಿಸಿದ್ದಾರೆ.

‘2014ರ ಲೋಕಸಭೆ ಚುನಾವಣೆಗೆ ಮಾರ್ಚ್ 5ರಂದು ದಿನಾಂಕಗಳನ್ನು ಘೋಷಿಸಲಾಗಿತ್ತು. ಈ ಬಾರಿ ಚುನಾವಣೆ ಘೋಷಣೆ ತಡವಾಗುತ್ತಿರುವವಿಷಯಪ್ರಸ್ತಾಪಿಸಿರುವವಿರೋಧಪಕ್ಷಗಳು ‘ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿಯೇ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯನ್ನು ತಡ ಮಾಡುತ್ತಿದೆ. ಈ ಮೂಲಕ ಹಲವು ಸಮಾಜಕಲ್ಯಾಣ ಯೋಜನೆಗಳು ಮತ್ತು ನೂತನ ಜನಪ್ರಿಯಕಾರ್ಯಕ್ರಮಗಳನ್ನು ರೂಪಿಸಲು, ಘೋಷಣೆಗಳನ್ನು ಮೊಳಗಿಸಲು ಪ್ರಧಾನಿಗೆ ಅನುಕೂಲ ಮಾಡಿಕೊಡುತ್ತಿದೆ. ಒಂದು ವೇಳೆ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಆಯೋಗ ಪ್ರಧಾನಿಗೆ ಅನುಕೂಲ ಮಾಡಿಕೊಡುತ್ತಿದೆ’ ಎಂದು ಆರೋಪಿಸಿದ್ದವು.

ಗುಜರಾತ್ ವಿಧಾನಸಭೆ ಚುನಾವಣೆಗೂ ಮೊದಲು ಸಹ ಆಯೋಗದ ವಿರುದ್ಧಇಂಥದ್ದೇ ಆರೋಪಗಳು ಕೇಳಿ ಬಂದಿತ್ತು. ಆಡಳಿತಾರೂಢ ಬಿಜೆಪಿ ಪಕ್ಷಕ್ಕೆಜನಸ್ನೇಹಿ ಕಾರ್ಯಕ್ರಮಗಳನ್ನು ಘೋಷಿಸಲು ಅವಕಾಶಮಾಡಿಕೊಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ದೂರಿದ್ದವು.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಅಧಿಕಾರಿ, ‘ಈ ಬಾರಿ ಚುನಾವಣಾ ಪ್ರಕ್ರಿಯೆಗೆ ಸಾಕಷ್ಟು ಕಾಲಾವಕಾಶ ಇರುವಂತೆ ದಿನಾಂಕಗಳನ್ನು ಘೋಷಿಸಲಾಗುವುದು’ ಎಂದು ಹೇಳಿದ್ದಾರೆ.

‘2014ರಲ್ಲಿ ಚುನಾವಣೆಯನ್ನು ಮಾರ್ಚ್‌ 5ರಂದು ಘೋಷಿಸಲಾಗಿತ್ತು. ಫಲಿತಾಂಶ ಘೋಷಿಸಲು ಮೇ 31 ದಿನಾಂಕವಾಗಿತ್ತು. ಈ ಬಾರಿ ಜೂನ್ 3ರಂದುಫಲಿತಾಂಶ ಘೋಷಿಸಬೇಕು ಎಂದುಕೊಂಡಿದ್ದೇವೆ.ಹೀಗಾಗಿ ಚುನಾವಣೆ ಘೋಷಣೆಯನ್ನೂ ತುಸು ನಿಧಾನವಾಗಿ ಮಾಡಲಿದ್ದೇವೆ’ ಎಂದುಹೇಳಿದ್ದಾರೆ.

‘ಕಳೆದ ಕೆಲ ತಿಂಗಳುಗಳಿಂದ ಚುನಾವಣಾ ಆಯೋಗದ ಅಧಿಕಾರಿಗಳು ದೇಶದಾದ್ಯಂತ ಪ್ರವಾಸ ಮಾಡುತ್ತಿದ್ದು ವಿವಿಧ ರಾಜ್ಯಗಳಲ್ಲಿ ಆಗಿರುವ ಸಿದ್ಧತೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಬಾರಿ ಲೋಕಸಭೆಯ ಜೊತೆಜೊತೆಗೆ ಒಂದು ರಾಜ್ಯದ (ಆಂಧ್ರಪ್ರದೇಶ)ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇರುವುದು ಅಧಿಕಾರಿಗಳ ಕಾರ್ಯಭಾರವನ್ನು ಹೆಚ್ಚಿಸಿದೆ. ಈ ವಾರದ ಆರಂಭದಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಬೇಟಿ ನೀಡಿ ಚುನಾವಣಾ ಸಿದ್ಧತೆ ಪರಿಶೀಲಸಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಬಹುತೇಕ ರಾಜಕೀಯ ಪಕ್ಷಗಳು ಲೋಕಸಭೆಯ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಆಯೋಗವು ಈ ಪ್ರಸ್ತಾವದ ಸಾಧಕ–ಬಾಧಕಗಳನ್ನು ಪರಿಶೀಲಿಸುತ್ತಿದೆ. ಒಟ್ಟೊಟ್ಟಿಗೆ ಚುನಾವಣೆ ನಡೆಯುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿ, ‘ಸೂಕ್ತ ಕಾಲದಲ್ಲಿ ನಿರ್ಧಾರ ಪ್ರಕಟಿಸಲಾಗುವುದು’ ಎಂದಷ್ಟೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.