ADVERTISEMENT

ಡಿ.11ರಿಂದ ಸಂಸತ್‌ ಅಧಿವೇಶನ

ಪಿಟಿಐ
Published 14 ನವೆಂಬರ್ 2018, 16:45 IST
Last Updated 14 ನವೆಂಬರ್ 2018, 16:45 IST

ನವದೆಹಲಿ: ಸಂಸತ್‌ನ ಚಳಿಗಾಲದ ಅಧಿವೇಶನ ಡಿಸೆಂಬರ್‌ 11ರಿಂದ ಆರಂಭವಾಗಲಿದ್ದು ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವೂ ಅದೇ ದಿನ ಪ್ರಕಟವಾಗಲಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆಗೂ ಮುನ್ನ ಎದುರಿಸಲಿರುವ ಪೂರ್ಣ ಪ್ರಮಾಣದ ಕೊನೆಯ ಅಧಿವೇಶನ ಇದಾಗಲಿದೆ. ಡಿಸೆಂಬರ್‌ 11ರಿಂದ ಜನವರಿ 8ರ ತನಕ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಸಮಿತಿ ಶಿಫಾರಸು ಮಾಡಿದ್ದು ಆ ಪ್ರಕಾರವೇ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್‌ ಗೊಯಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT