ಅಮಾನತು
ಚೆನ್ನೈ: ‘ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಡಿಎಂಕೆಯ ಯುವ ಘಟಕದ ಕಾರ್ಯಕರ್ತರೊಬ್ಬರು ನನಗೆ ಒತ್ತಾಯ ಮಾಡುತ್ತಿದ್ದಾರೆ’ ಎಂದು ರಾಣಿಪೇಟ್ ಜಿಲ್ಲೆಯ ಅರಕ್ಕೋಣಂನ 20 ವರ್ಷದ ಯುವತಿಯೊಬ್ಬರು ಆರೋಪಿಸಿದ್ದಾರೆ.
ಯುವತಿಯು ಆರೋಪ ಮಾಡಿದ ಬಳಿಕ ಡಿಎಂಕೆಯು, ಅರಕ್ಕೋಣಂ ಮೂಲದ ಕಾರ್ಯಕರ್ತ ಆರ್ ತೈವ ಅಲಿಯಾಸ್ ತೈವಸೆಯಲ್ ಅವರನ್ನು ಪಕ್ಷದಿಂದ ಹುದ್ದೆಯಿಂದ ಬುಧವಾರ ಅಮಾನತು ಮಾಡಿದೆ. ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಎಐಎಡಿಎಂಕೆಯು ಡಿಎಂಕೆ ವಿರುದ್ಧ ರಾಣಿಪೇಟ್‌ನಲ್ಲಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಪಕ್ಷದ ನಾಯಕಿ ಬಿ. ವಲರಮತಿ ಅವರು, ‘ಯುವತಿಗೆ ನ್ಯಾಯ ದೊರಕುವವರೆಗೂ ಎಐಎಡಿಎಂಕೆಯ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ತಿಳಿಸಿದ್ದಾರೆ.
‘ಆರೋಪಿ ಡಿಎಂಕೆ ಕಾರ್ಯಕರ್ತನ ವಿರುದ್ಧ ರಾಜ್ಯ ಸರ್ಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ನಮಗೆ ತಿಳಿಸಬೇಕು. ಕ್ರಮ ಜರುಗಿಸದೇ ಇದ್ದರೆ ನಮ್ಮ ಪಕ್ಷ ಬೃಹತ್ ಪ್ರತಿಭಟನೆ ನಡೆಸುತ್ತದೆ’ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.