ADVERTISEMENT

ಗರ್ಭಿಣಿ ದಾಖಲಿಸಿಕೊಳ್ಳಲು ವೈದ್ಯರ ನಿರಾಕರಣೆ: ಆಸ್ಪತ್ರೆ ಬಯಲಲ್ಲೇ ಹೆರಿಗೆ

ಏಜೆನ್ಸೀಸ್
Published 28 ಫೆಬ್ರುವರಿ 2020, 5:28 IST
Last Updated 28 ಫೆಬ್ರುವರಿ 2020, 5:28 IST
ಆಸ್ಪತ್ರೆಯ ಬಯಲಲ್ಲೇ ಗರ್ಭಿಣಿಗೆ ಹೆರಿಗೆಯಾಗಿರುವುದು
ಆಸ್ಪತ್ರೆಯ ಬಯಲಲ್ಲೇ ಗರ್ಭಿಣಿಗೆ ಹೆರಿಗೆಯಾಗಿರುವುದು   
""
""

ಬಹರಾಯಿಚ್ (ಉತ್ತರಪ್ರದೇಶ): ಹೆರಿಗೆಗೆಂದು ಬಂದ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆ ವೈದ್ಯರು ನಿರಾಕರಿಸಿದ ಕಾರಣ ಮಹಿಳೆಗೆ ಬಯಲಲ್ಲಿಯೇ ಹೆರಿಗೆಯಾದ ದಾರುಣ ಘಟನೆ ಗುರುವಾರ ರಾತ್ರಿನಡೆದಿದೆ.

ಜಿಲ್ಲಾ ಮಹಿಳಾ ಚಿಕಿತ್ಸಾಲಯ

ಉತ್ತರಪ್ರದೇಶದಬಹರಾಯಿಚ್ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ಹೊಟ್ಟೆನೋವು ಕಾಣಿಸಿಕೊಂಡ ಕೂಡಲೆ ಮಹಿಳೆಯನ್ನು ಸಂಬಂಧಿಕರುಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆದಾಖಲಿಸಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದಾರೆ. ಸಂಬಂಧಿಕರು ಆಗ್ರಹಿಸಿದರೂ ವೈದ್ಯರು ದಾಖಲಿಸಿಕೊಳ್ಳಲಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದರೂವೈದ್ಯರಾಗಲೀ, ಸಿಬ್ಬಂದಿಯಾಗಲೀಉಪಚರಿಸಲಿಲ್ಲ. ಪರಿಣಾಮ ಆಸ್ಪತ್ರೆಯ ಬಯಲಲ್ಲಿಯೇ ಮಹಿಳೆಗೆ ಹೆರಿಗೆಯಾಗಿದೆ. ಹೆರಿಗೆ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ರಗ್ಗನ್ನೇ ಸುತ್ತ ಪರದೆಯನ್ನಾಗಿ ಮಾಡಿಕೊಂಡಿದ್ದಾರೆ.

ಮುಖ್ಯ ವೈದ್ಯಕೀಯ ಅಧೀಕ್ಷಕ ಡಿ.ಕೆ.ಸಿಂಗ್

ಈ ಸಂಬಂಧ ಮುಖ್ಯ ವೈದ್ಯಕೀಯ ಅಧೀಕ್ಷಕ ಡಿ.ಕೆ.ಸಿಂಗ್ ಅವರನ್ನು ಸಂಪರ್ಕಿಸಿದಾಗ 'ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಯಾರು ನಿರಾಕರಿಸಿದರು ಎಂಬುದನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.