ADVERTISEMENT

ಅಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಮನೆಯಲ್ಲಿ ಹೆರಿಗೆ: ತಾಯಿ, ಶಿಶು ಸಾವು

ಅರ್ಜುನ್ ರಘುನಾಥ್
Published 21 ಫೆಬ್ರುವರಿ 2024, 12:21 IST
Last Updated 21 ಫೆಬ್ರುವರಿ 2024, 12:21 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ತಿರುವನಂತಪುರ: ಅಕ್ಯುಪಂಕ್ಚರ್ ಚಿಕಿತ್ಸೆ(ಸೂಜಿ ಚಿಕಿತ್ಸೆ) ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಪತಿ ಒತ್ತಾಯಿಸಿದ ಪರಿಣಾಮ ತಾಯಿ ಹಾಗೂ ನವಜಾತ ಶಿಶು ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಕರಕ್ಕಮಂಡಪಂನ ಶಮೀರಾ (36) ಎಂದು ಗುರುತಿಸಲಾಗಿದೆ.

ADVERTISEMENT

ಮೂರು ಮಕ್ಕಳ ತಾಯಿ ಆಗಿದ್ದ ಶಮೀರಾ, ನಾಲ್ಕನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ಹೆರಿಗೆ ಸಮಯದಲ್ಲಿ ಆಕೆಯನ್ನು ಆಸ್ಪತ್ರೆಗೆ ತೆರಳದಂತೆ ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯದಂತೆ ಪತಿ ಹೇಳಿದ್ದ. ಮನೆಯಲ್ಲಿಯೇ ಮಹಿಳೆಯೊಬ್ಬರ ಸಹಾಯದಿಂದ ಸೂಜಿ ಚಿಕಿತ್ಸೆಯ(ಅಕ್ಯುಪಂಕ್ಚರ್) ಮೂಲಕ ಹೆರಿಗೆ ಮಾಡಿಸಿದ್ದಾನೆ. ಈ ವೇಳೆ ತಾಯಿ ಹಾಗೂ ಶಿಶು ಮೃತಪಟ್ಟಿದ್ದಾರೆ.

ಅಕ್ಯುಪಂಕ್ಚರ್ ಚಿಕಿತ್ಸೆ (ಸಂಗ್ರಹ ಚಿತ್ರ)

ಶಮೀರಾ ಅವರನ್ನು ಗರ್ಭಾವಸ್ಥೆ ಸಮಯದಲ್ಲೂ ಸರಿಯಾಗಿ ಆಕೆಯ ಪತಿ ನಯಾಸ್ ನೋಡಿಕೊಂಡಿಲ್ಲ. ಔಷಧಗಳನ್ನು ತೆಗೆದುಕೊಳ್ಳದಂತೆ ಸೂಚಿಸಿದ್ದ. ಆಸ್ಪತ್ರೆಗೆ ಹೋಗದಂತೆಯೂ ಬೆದರಿಕೆ ಹಾಕಿದ್ದ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಈ ಸಂಬಂಧ ಮಾತನಾಡಿದ ಸಚಿವೆ ವೀಣಾ ಜಾರ್ಜ್, ಆರೋಪಿ ಪತಿ ನಯಾಸ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ತಾಯಿ ಹಾಗೂ ಶಿಶು ಸಾವಿಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಘಟನೆಯನ್ನು ನರ ಹತ್ಯೆ ಎಂದೇ ಪರಿಗಣಿಸಲಾಗುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.