ADVERTISEMENT

ಮಥುರಾ: ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ; ಮಂತ್ರವಾದಿ ಪರಾರಿ

ಪಿಟಿಐ
Published 5 ಜೂನ್ 2021, 9:30 IST
Last Updated 5 ಜೂನ್ 2021, 9:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಥುರಾ‌: ‘ಇಲ್ಲಿನ ಬಾರ್ಸಾನಾ ಪ್ರದೇಶದ ಹಳ್ಳಿಯೊಂದರಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಮಂತ್ರವಾದಿಯೊಬ್ಬ ಅತ್ಯಾಚಾರವೆಸಗಿದ್ದಾನೆ’ ಎಂದು ಪೊಲೀಸರು ಶನಿವಾರ ತಿಳಿಸಿದರು.

‘ಗುರುವಾರ ಸಂತ್ರಸ್ತೆಯ ಗ್ರಾಮಕ್ಕೆ ತನ್ನ ಸಹಚರ ಸಂದೀಪ್‌ ಥೋಮರ್‌ನೊಂದಿಗೆ ಬಂದಿದ್ದ ಮಂತ್ರವಾದಿ ನರೇಂದ್ರ ಎಂಬಾತ ಗ್ರಾಮಸ್ಥರ ಮೇಲೆವಾಮಾಚಾರ ಮಾಡಿದ್ದಾನೆ. ಈ ಬಳಿಕ ಸಂತ್ರಸ್ತೆಗೆ ರಾತ್ರಿ ತನ್ನನ್ನು ಭೇಟಿಯಾಗುವಂತೆ ಹೇಳಿದ್ದಾನೆ. ಈ ವೇಳೆ ಆತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮಹಿಳೆಯ ದೂರಿನ ಆಧಾರದ ಮೇಲೆ ಸಹಚರನನ್ನು ಬಂಧಿಸಲಾಗಿದೆ. ಆದರೆ ಮಂತ್ರವಾದಿ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿ ಆಜಾದ್‌ ಪಾಲ್‌ ಸಿಂಗ್‌ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.