ADVERTISEMENT

ಎನ್‌ಡಿಎ ಅವಧಿಯಲ್ಲಿ ‘ನಾರಿ ಶಕ್ತಿ’ ಕೇಂದ್ರಿತ ಅಭಿವೃದ್ಧಿ: ಪ್ರಧಾನಿ ಮೋದಿ

ಪಿಟಿಐ
Published 8 ಜೂನ್ 2025, 6:45 IST
Last Updated 8 ಜೂನ್ 2025, 6:45 IST
   

ನವದೆಹಲಿ: ಕಳೆದ 11 ವರ್ಷಗಳ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಮಹಿಳಾ ನೇತೃತ್ವದಿಂದ ಕೂಡಿದ ಅಭಿವೃದ್ದಿಯನ್ನು ಮರುವ್ಯಾಖ್ಯಾನಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಜೂನ್‌ 9ರಂದು ಎನ್‌ಡಿಎ ಸರ್ಕಾರವು ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು 1 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕ್ರೀಡೆ, ಸೈನ್ಯ ಸೇರಿದಂತೆ ಎಲ್ಲಾ ವಲಯಗಳಲ್ಲೂ ಭಾರತೀಯ ಮಹಿಳೆಯರು ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಇದು ಹಲವರಿಗೆ ಮಾದರಿಯಾಗಿದೆ ಎಂದರು.

ADVERTISEMENT

ಸ್ವಚ್ಛ ಭಾರತ, ಜನ್‌ ಧನ್‌, ಉಜ್ವಲ ಯೋಜನೆ, ಮುದ್ರಾ ಯೋಜನೆ, ಪಿ.ಎಂ. ಆವಾಸ್‌ ಯೋಜನೆ, ಬೇಟಿ ಬಚಾವೊ–ಬೇಟಿ ಪಡಾವೊ ಸೇರಿದಂತೆ ಎನ್‌ಡಿಎ ಸರ್ಕಾರದ ಹಲವು ಯೋಜನೆಗಳು ಮಹಿಳಾಪರ ಅಭಿವೃದ್ಧಿಯಿಂದ ಕೂಡಿವೆ ಎಂದು ತಿಳಿಸಿದರು.

ಮಹಿಳೆಯರ ಅಭಿವೃದ್ದಿಗೆ ಪೂರಕವಾಗುವ ಸರ್ಕಾರಿ ಯೋಜನೆಗಳ ಪಟ್ಟಿಯನ್ನು ಪ್ರಧಾನಿ ಮೋದಿ ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಗರ್ಭಿಣಿಯರ ಮರಣ ಪ್ರಮಾಣವು 2011–13ರಲ್ಲಿ ಲಕ್ಷಕ್ಕೆ 167 ಇದ್ದದ್ದು 2019–21ಕ್ಕೆ 93ಕ್ಕೆ ಇಳಿಕೆ ಕಂಡಿದೆ. ಪ್ರತಿ ಮನೆಗೂ ನಲ್ಲಿ ನೀರಿನ ಸೌಲಭ್ಯವು 2019ರಲ್ಲಿ 3.23ಕೋಟಿ ಮನೆಗಳಿಗೆ ಇದ್ದದ್ದು 2025ರ ಮೇ ವೇಳೆಗೆ 15.64 ಕೋಟಿಗೆ ಏರಿಕೆಯಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ10 ಕೋಟಿ ಮನೆಗಳಿಗೆ ಗ್ಯಾಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂಬ ಮಾಹಿತಿಯಿದೆ.

ಎನ್‌ಡಿಎ ಸರ್ಕಾರವು ಮೂರನೇ ಅವಧಿಗೆ ಅಧಿಕಾರಕ್ಕೇರಿ 1 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಬಡವರು, ನಿರ್ಗತಿಕರು, ರೈತರು, ಯುವಕರಿಗಾಗಿ ಸರ್ಕಾರವು ಕೈಗೊಂಡಿರುವ ಯೋಜನೆಗಳ ಕುರಿತು ಪ್ರಧಾನಿ ಮೋದಿ ಮಾಹಿತಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.