ADVERTISEMENT

ಉ. ಪ್ರದೇಶ: ಯೋಗಿ ಸರ್ಕಾರ ಕಮಿಷನ್, ಭ್ರಷ್ಟಾಚಾರದ ಪರಂಪರೆಯನ್ನು ಕೆಡವಿದೆ- ನಖ್ವಿ

ಪಿಟಿಐ
Published 19 ಡಿಸೆಂಬರ್ 2021, 11:12 IST
Last Updated 19 ಡಿಸೆಂಬರ್ 2021, 11:12 IST
ಮುಕ್ತಾರ್ ಅಬ್ಬಾಸ್ ನಖ್ವಿ
ಮುಕ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ: ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ 'ಕಟ್, ಕಮಿಷನ್, ಭ್ರಷ್ಟಾಚಾರ' ಮತ್ತು 'ದಂಗಾ (ಗಲಭೆಗಳು) ಮತ್ತು ದಬಾಂಗ್ಸ್ ರಾಜಕಾರಣದ ಪರಂಪರೆಯನ್ನು ಕೆಡವಿದೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಂಡಾಗಳ ಅಡಗುತಾಣವನ್ನು ಧ್ವಂಸಗೊಳಿಸುವ ಮೂಲಕ ಮುಖ್ಯಮಂತ್ರಿ ಸಾಮಾನ್ಯ ಜನರ ಸುರಕ್ಷತೆ ಮತ್ತು ಘನತೆಯನ್ನು ಖಾತರಿಪಡಿಸಿದ್ದಾರೆ' ಎಂದರು.

'ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಮತ್ತು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಗಳಿಂದ ಇದು 'ಇಕ್ಬಾಲ್ (ಅಧಿಕಾರ), ಇನ್ಸಾಫ್ (ನ್ಯಾಯ) ಮತ್ತು ಇಮಾನ್ (ಸಮಗ್ರತೆ)' ಯುಗವಾಗಿದೆ. ಅಲ್ಲಿ ದೇಶದ ಸಮಗ್ರ ಅಭಿವೃದ್ಧಿ, ಭದ್ರತೆ ಮತ್ತು ಸಮೃದ್ಧಿಗೆ ಆದ್ಯತೆ ನೀಡಲಾಗಿದೆ' ಎಂದು ಹೇಳಿದರು.

ADVERTISEMENT

'ರಾಜವಂಶವು 'ಮೂರು 'ಬಿ'ಗಳನ್ನು ಅಂದರೆ, 'ಬಲವಾಯಿಗಳ ಗುಂಪು (ಗಲಭೆಕೋರರು), ಬಾಹುಬಲಿ (ಬಲಶಾಲಿಗಳು) ಮತ್ತು ಬೇಯಿಮಾನಿಗಳನ್ನು (ಅಪ್ರಾಮಾಣಿಕ) ಅನ್ನು ರಕ್ಷಿಸಲು ಪ್ರಜಾಪ್ರಭುತ್ವದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ'. ಆದರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಘನತೆಯೊಂದಿಗೆ ಅಭಿವೃದ್ಧಿಯ ಅಜೆಂಡಾವನ್ನು ಇಟ್ಟುಕೊಂಡು ದೃಡನಿಶ್ಚಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ' ಎಂದು ತಿಳಿಸಿದರು.

'ಸಮಾಜದ ಎಲ್ಲ ವರ್ಗದವರ ಸಬಲೀಕರಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.