ADVERTISEMENT

ಕಾಡ್ಗಿಚ್ಚಿಗೆ ಯುವಕ ಬಲಿ

ಪಿಟಿಐ
Published 12 ಏಪ್ರಿಲ್ 2021, 13:16 IST
Last Updated 12 ಏಪ್ರಿಲ್ 2021, 13:16 IST

ಪಿಥೋರ್‌ಗಡ (ಉತ್ತರಖಂಡ):ಕಾಡ್ಗಿಚ್ಚನ್ನು ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ಯುವಕನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ಪಿಥೋರ್‌ಗಡ ಜಿಲ್ಲೆಯ ಡಿಡಿಹಟ್‌ ಅರಣ್ಯ ವಲಯದಲ್ಲಿ ನಡೆದಿದೆ.

‘ಕಾಡ್ಚಿಚ್ಚು ನಂದಿಸಲು ಸ್ಥಳೀಯರ ನೆರವು ಕೋರಲಾಗಿತ್ತು. ಈ ವೇಳೆ ಪಂಕಜ್‌ ಸಿಂಗ್‌ ದಿಯೋಪಾ (19) ಬೆಂಕಿಯ ಜ್ವಾಲೆ ಆವರಿಸಿಕೊಂಡಿದ್ದ 500 ಮೀಟರ್‌ ಆಳದ ಕಂದಕಕ್ಕೆ ಬಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಅಷ್ಟರಾಗಲೇ ಆತ ಮೃತಪಟ್ಟಿದ್ದ’ ಎಂದು ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್‌ಒ) ವಿನಯ್ ಭಾರ್ಗವ ಹೇಳಿದರು.

ಕಾಡ್ಗಿಚ್ಚಿನಿಂದಾಗಿ ಈ ವರ್ಷ ಉತ್ತರಖಂಡದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.