ADVERTISEMENT

ವೈ.ಎಸ್‌. ಶರ್ಮಿಳಾ ವಶಕ್ಕೆ: ಪಾದಯಾತ್ರೆ ಅನುಮತಿ ಹಿಂದಕ್ಕೆ

ಪಿಟಿಐ
Published 19 ಫೆಬ್ರುವರಿ 2023, 12:50 IST
Last Updated 19 ಫೆಬ್ರುವರಿ 2023, 12:50 IST
ವೈ.ಎಸ್‌. ಶರ್ಮಿಳಾ
ವೈ.ಎಸ್‌. ಶರ್ಮಿಳಾ   

ಹೈದರಾಬಾದ್‌ (ಪಿಟಿಐ): ವೈಎಸ್‌ಆರ್‌ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಮುಖ್ಯಸ್ಥೆ ವೈ.ಎಸ್‌. ಶರ್ಮಿಳಾ ಅವರನ್ನು ಮೆಹಬೂಬಾಬಾದ್‌ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಶರ್ಮಿಳಾ ಅವರು ರಾಜ್ಯದಾದ್ಯಂತ ನಡೆಸುತ್ತಿರುವ ‘ಪ್ರಜಾ ಪ್ರಸ್ಥಾನಂ’ ಪಾದಯಾತ್ರೆಯು ಶನಿವಾರ ಮೆಹಬೂಬಾಬಾದ್‌ ಜಿಲ್ಲೆಯಲ್ಲಿ ಸಾಗುತ್ತಿತ್ತು. ಈ ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಿಆರ್‌ಎಸ್‌ ಶಾಸಕ ಬನೂತ್‌ ಶಂಕರ್‌ ನಾಯ್ಕ್‌ ಅವರ ಕುರಿತು ಶರ್ಮಿಳಾ ಅವರು ಅವಹೇಳನಕಾರಿ ಮಾತನಾಡಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಶರ್ಮಿಳಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಶರ್ಮಿಳಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಆರ್‌ಎಸ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶರ್ಮಿಳಾ ಅವರು ನಡೆಸುತ್ತಿರುವ ಪಾದಯಾತ್ರೆಗೆ ನೀಡಲಾಗಿದ್ದ ಅನುಮತಿಯನ್ನು ರದ್ದು ಮಾಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

‘ಶರ್ಮಿಳಾ ಅವರ ಸುರಕ್ಷತೆಯ ದೃಷ್ಟಿಯಿಂದಲೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ಹೈದರಾಬಾದ್‌ಗೆ ಕಳುಹಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.