ADVERTISEMENT

ಪ್ರಾಣಿ ಮಾದರಿಗಳ ಸಂರಕ್ಷಣೆ: ದತ್ತಾಂಶ, ಮಾಹಿತಿ ವಿನಿಮಯಕ್ಕೆ ಒಡಂಬಡಿಕೆ

ಪಿಟಿಐ
Published 26 ಸೆಪ್ಟೆಂಬರ್ 2021, 6:43 IST
Last Updated 26 ಸೆಪ್ಟೆಂಬರ್ 2021, 6:43 IST
ಧೃತಿ ಬ್ಯಾನರ್ಜಿ
ಧೃತಿ ಬ್ಯಾನರ್ಜಿ   

ಕೋಲ್ಕತ್ತ: ಭಾರತೀಯ ಮೃಗಾಲಯ ಸರ್ವೇಕ್ಷಣಾ ಸಂಸ್ಥೆಯು (ಝಡ್‌ಎಸ್‌ಐ) ಲಂಡನ್‌ನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ (ಎನ್‌ಎಚ್ಎಂ) ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಒಡಂಬಡಿಕೆಯ ಅವಧಿ ಐದು ವರ್ಷಗಳು.

ಪ್ರಾಣಿ ಮಾದರಿಗಳ ಸಂರಕ್ಷಣೆ, ಸಂಗ್ರಹ, ಅಧ್ಯಯನ ಕುರಿತು ಒಟ್ಟಾಗಿ ಕಾರ್ಯನಿರ್ವಹಿಸುವುದು ಹಾಗೂ ದತ್ತಾಂಶ ಮತ್ತು ಪೂರಕ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ.

ವರ್ಚುಯಲ್ ವೇದಿಕೆಯಲ್ಲಿ ಝಡ್‌ಎಸ್‌ಐ ನಿರ್ದೇಶಕಿ ಡಾ.ಧೃತಿ ಬ್ಯಾನರ್ಜಿ ಮತ್ತು ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದ ನಿರ್ದೇಶಕ ಡಾ.ಡಗ್ಲಾಸ್‌ ಗುರ್‌ ಅವರು ಒಡಂಬಡಿಕೆಗೆ ಸಹಿ ಹಾಕಿದರು ಎಂದು ಝಡ್‌ಎಸ್‌ಐ ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಪ್ರಾಣಿ ವೈವಿಧ್ಯ ಸಂಶೋಧನೆಗೆ ಸಂಬಂಧಿಸಿ ವೈಜ್ಞಾನಿಕ ಮಾಹಿತಿಗಳ ವಿನಿಮಯ ಆಗುವುದರಿಂದ ಈ ಒಪ್ಪಂದದಿಂದ ಉಭಯ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಡಾ.ಧೃತಿ ಬ್ಯಾನರ್ಜಿ ಅಭಿಪ್ರಾಯಪಟ್ಟರು.

ಝೆಡ್‌ಎಸ್ಐ ಕೋಲ್ಕತ್ತದಲ್ಲಿ ಮುಖ್ಯ ಕಚೇರಿ ಹೊಂದಿದ್ದು, 16 ಕಡೆ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಸಂಸ್ಥೆಯು 50 ಲಕ್ಷ ಪ್ರಾಣಿ ಮಾದರಿಗಳ ಸಂಗ್ರಹ ಹೊಂದಿದ್ದು, 450 ವಿಜ್ಞಾನಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.