ADVERTISEMENT

ಅಂತರರಾಜ್ಯ ಮರಳು ಸಾಗಣೆಗೆ ತಡೆ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 19:30 IST
Last Updated 3 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ): ‘ನಮ್ಮ  ರಾಜ್ಯದಿಂದ ಬೇರೆ ರಾಜ್ಯಗಳಿಗೆ ಮರಳು ಸಾಗಣೆಯಾಗುವುದನ್ನು ತಪ್ಪಿಸಲಾ ಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿಧಾನಸಭೆಯಲ್ಲಿ ಮಂಗಳವಾರ ಕೆ.ಆರ್. ಪೇಟೆ ಶಾಸಕ ನಾರಾಯಣ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ, ಅವರು ಹೊಸ ಮರಳು ನೀತಿಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು  ಈ ಬಗ್ಗೆ ಇದೇ ತಿಂಗಳ ೮ ಅಥವಾ ೯ ರಂದು ಸರ್ಕಾರಿ ಆದೇಶ ಹೊರಡಿಸ ಲಾಗುವುದು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಮನೆ ಕಟ್ಟಿಕೊಳ್ಳಲು ಅಕ್ಕಪಕ್ಕದ ಕೆರೆ, ನದಿಗಳಿಂದ ಮರಳು ಬಳಸಿದರೆ ಅವರಿಗೆ ಕಿರುಕುಳ ನೀಡದಂತೆ ಅಧಿಕಾರಿ ಗಳಿಗೆ ಸೂಚಿಸಲಾಗುವುದು ಎಂದರು. ರಾಜ್ಯದಲ್ಲಿ ೧,೮೬೪ ಮರಳು ಬ್ಲಾಗಳನ್ನು ಗುರುತಿಸಲಾಗಿದೆ. ವಾರ್ಷಿಕ ೭೫ ಲಕ್ಷ ಟನ್ ಸಾಧಾರಣ ಮರಳು ಹಾಗೂ ೧೫ ಲಕ್ಷ ಟನ್ ಉತ್ಪಾದಿತ ಮರಳು ಲಭ್ಯವಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ ೨೩೦ ಲಕ್ಷ ಟನ್ ಮರಳು ಬೇಡಿಕೆ ಇದೆ. ೭೨೦೭.೨೨ ಹೆಕ್ಟೇರ್  ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದರು.

ಕರ್ನಾಟಕ ಉಪ ಖನಿಜ ರಿಯಾ ಯಿತಿ ನಿಯಮಾವಳಿ ಪ್ರಕಾರ ಜಿಲ್ಲಾ ಉಸ್ತುವಾರಿ ಸಮಿತಿ ಗುರುತಿಸಿದ ಮರಳುಬ್ಲಾಕ್‌ಗಳಲ್ಲಿ ಮರಳು ತೆಗೆದು ವಿಲೇವಾರಿ ಮಾಡಲು ಲೋಕೋಪ ಯೋಗಿ ಇಲಾಖೆಗೆ ಅಧಿಕಾರವಿದೆ. ನದಿ ಪಾತ್ರಗಳಿಂದ ಮರಳು ತೆಗೆದು ದಾಸ್ತಾನು ಮಳಿಗೆಗಳಿಗೆ ಸಾಗಿಸಲು ಲೋಕೋಪಯೋಗಿ ಇಲಾಖೆ ಕ್ರಮ ಕೈ ಗೊಂಡಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.