ADVERTISEMENT

ಅಕ್ಟೋಬರ್‌ 11ಕ್ಕೆ ಮೈಸೂರು ದಸರಾ

ಮಹೋತ್ಸವ ಸಭೆಯ ಬಳಿಕ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2016, 8:30 IST
Last Updated 4 ಆಗಸ್ಟ್ 2016, 8:30 IST
ಅಕ್ಟೋಬರ್‌ 11ಕ್ಕೆ ಮೈಸೂರು ದಸರಾ
ಅಕ್ಟೋಬರ್‌ 11ಕ್ಕೆ ಮೈಸೂರು ದಸರಾ   

ಬೆಂಗಳೂರು: ಪ್ರಸಕ್ತ ವರ್ಷದ ವಿಶ್ವ ಪ್ರಸಿದ್ಧ ಮೈಸೂರು ದಸರಾ ಅಕ್ಟೋಬರ್‌ 11ರಂದು ಜರುಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಈ ಸಂಬಂಧ ವಿಧಾನಸೌಧದಲ್ಲಿ ಗುರುವಾರ ನಡೆದ 2016ರ ದಸರಾ ಮಹೋತ್ಸವ ಸಿದ್ಧತಾ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.   

ಅ. 1ರಿಂದ 11ರವರೆಗೆ ದಸರಾ ಮಹೋತ್ಸವ ಜರುಗಲಿದೆ. 1ರಂದು ಬೆಳಿಗ್ಗೆ 11.40ಕ್ಕೆ ದಸರಾಕ್ಕೆ ಚಾಲನೆ ನೀಡಲಾಗುವುದು. ನವರಾತ್ರಿಯ ಕೊನೆ ದಿನ(ಅ. 11) ವಿಜಯದಶಮಿಯಂದು ಜಂಬೂಸವಾರಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಜಂಬೂಸವಾರಿ ಬಳಿಕ ಪಂಜಿನ ಮೆರವಣಿಗೆ ನಡೆಯಲಿದೆ. ದಸರಾ ಸರಳವೂ ಅಲ್ಲದ, ಅದ್ದೂರಿಯಾಗಿಯೂ ಇರದೆ ಸಾಂಸ್ಕೃತಿಕವಾಗಿ ಜನರನ್ನು ಸೆಳೆಯುವ ನಿಟ್ಟಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ದಸರಾ ಉದ್ಘಾಟನೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಹಿರಿಯ ಸಾಹಿತಿಗಳ ಹೆಸರು ಪ್ರಸ್ತಾಪವಾಗಿವೆ ಎನ್ನಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.