ADVERTISEMENT

ಅತ್ಯಾಚಾರ: ನೊಂದ ಬಾಲಕಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಮೂಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ ಲಿಂಗಪಯ್ಯಕಾಡಿನಲ್ಲಿ ಶುಕ್ರವಾರ ಸಂಜೆ ಯುವಕನೊಬ್ಬ ಹುಬ್ಬಳ್ಳಿ ಮೂಲದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದು, ಮನನೊಂದ ಆಕೆ ರಾಸಾಯನಿಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಮಂಜುನಾಥ ಯಾನೆ ಸ್ಕಾರ್ಪಿಯೋ ಮಂಜು ಎಂಬಾತ ಇನ್ನೊಬ್ಬ ಮಹಿಳೆಯ ಸಹಾಯದಿಂದ ಬಾಲಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ. ಕೂಲಿ ಕೆಲಸಕ್ಕೆ ಹೋಗಿದ್ದ ಆಕೆಯ ಪೋಷಕರು ಮನೆಗೆ ಬಂದಾಗ ಮಗಳು ಮನೆಯಲ್ಲಿ ಇರಲಿಲ್ಲ. ವಿಳಂಬವಾಗಿ ಬಂದ ಪೋಷಕರಿಗೆ ಬಾಲಕಿ ಅತ್ಯಾಚಾರ ವಿಚಾರ ತಿಳಿಸದೆ ವಿಷ ಸೇವಿಸಿದಳು.

ಅಸ್ವಸ್ಥಳಾದ ಬಾಲಕಿಯನ್ನು ತಕ್ಷಣ ಮುಕ್ಕದ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂತು. ಬಾಲಕಿ ಈಗ ಮೂಲ್ಕಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಆರೋಪಿಯನ್ನು ಮೂಲ್ಕಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಹಿಂದೆ ಚಾಲಕನಾಗಿ ದುಡಿಯುತ್ತಿದ್ದ ಆರೋಪಿ ಸದ್ಯ ಕೆಲಸ ಇಲ್ಲದೆ ಬೈಕ್‌ನಲ್ಲಿ ಸುತ್ತಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.