ADVERTISEMENT

ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಬೇಡಿ ಎಂದಿದ್ದರು ಮೋದಿ, ಆದರೆ ಬಿಜೆಪಿ ಜಾಹೀರಾತಿನಲ್ಲಿ ಇದು ಯಾಕೆ ಹೀಗೆ?

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2018, 14:38 IST
Last Updated 27 ಏಪ್ರಿಲ್ 2018, 14:38 IST
ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಬೇಡಿ ಎಂದಿದ್ದರು ಮೋದಿ, ಆದರೆ ಬಿಜೆಪಿ ಜಾಹೀರಾತಿನಲ್ಲಿ ಇದು ಯಾಕೆ ಹೀಗೆ?
ಅತ್ಯಾಚಾರ ಪ್ರಕರಣಗಳನ್ನು ರಾಜಕೀಯಕ್ಕೆ ಬಳಸಬೇಡಿ ಎಂದಿದ್ದರು ಮೋದಿ, ಆದರೆ ಬಿಜೆಪಿ ಜಾಹೀರಾತಿನಲ್ಲಿ ಇದು ಯಾಕೆ ಹೀಗೆ?   

ಬೆಂಗಳೂರು: ಅತ್ಯಾಚಾರ ಎಂದರೆ ಅತ್ಯಾಚಾರ ಅಷ್ಟೇ. ಈ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆದವು. ಹಿಂದಿನ ಸರ್ಕಾರದ ಅವಧಿಯಲ್ಲಿ ಎಷ್ಟು ಪ್ರಕರಣಗಳು ನಡೆಯಿತು ಎಂಬುದರ ಬಗ್ಗೆ ಹೋಲಿಕೆ ಮಾಡಲು ನಾನು ಇಚ್ಛಿಸುವುದಿಲ್ಲ. ಅತ್ಯಾಚಾರ ಅತಿ ದುಃಖದ ಸಂಗತಿ. ಅತ್ಯಾಚಾರವನ್ನು ರಾಜಕೀಯ ವಿಷಯವನ್ನಾಗಿ ಮಾಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು 2018, ಏಪ್ರಿಲ್ 19ರಂದು ಲಂಡನ್‍ನಲ್ಲಿ ನಡೆದ ಭಾರತ್ ಕೀ ಬಾತ್ ಸಬ್ ಕೇ ಸಾಥ್ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದರು.

ಆದರೆ, ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ನೀಡಿರುವ ಜಾಹೀರಾತುಗಳನ್ನೊಮ್ಮೆ ಗಮನಿಸಿ.

(ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಜಾಹೀರಾತು)

ADVERTISEMENT

*  ಕಳೆದ 5 ವರ್ಷಗಳಲ್ಲಿ  3800ಕ್ಕಿಂತ ಹೆಚ್ಚು ಅತ್ಯಾಚಾರಗಳು ನಡೆದಿದ್ದವು.
* ಸುಮಾರು ಮುಗ್ದ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಪೈಶಾಚಿಕ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಇದರ ತನಿಖೆಯೂ ವಿಳಂಬವಾಗಿದೆ
ಇಂಥಾ ಕೃತ್ಯಗಳು ಕಡಿಮೆಯಾಗಲಿಲ್ಲ
* ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಂಡಿಲ್ಲ
* ಹಾಡಹಗಲೇ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯ ಆಭರಣವನ್ನು ದೋಚಲಾಯಿತು

ಮಹಿಳೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವ ದಕ್ಷ ಸರ್ಕಾರ ಇಲ್ಲಿ ಬೇಕಿದೆ.  ಅದಕ್ಕಾಗಿ ಬಿಜೆಪಿಗೆ ಮತ ನೀಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.