ADVERTISEMENT

ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST

ಬೆಂಗಳೂರು: ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಐಎಎಸ್, ಐಪಿಎಸ್ ಅಧಿಕಾರಿಗಳ ಮಟ್ಟದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. 26 ಐಎಎಸ್, 24 ಐಪಿಎಸ್, ತಲಾ ಇಬ್ಬರು ಐಎಫ್‌ಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಲತಾ ಕೃಷ್ಣರಾವ್ ಸೇರಿದಂತೆ ಹುದ್ದೆ ನಿರೀಕ್ಷೆಯಲ್ಲಿದ್ದ 6 ಜನ ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿದೆ. ಐಜಿಪಿ ಕೆ.ಎಲ್.ಸುಧೀರ್ ಅವರನ್ನು ಮೈಸೂರು ನಗರದ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಅಲ್ಲದೆ ನಾಲ್ವರು ಎಸ್‌ಪಿಗಳಿಗೆ ಡಿಐಜಿ ದರ್ಜೆಗೆ ಬಡ್ತಿ ನೀಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳು (ಐಎಎಸ್): ಜಿ.ಲತಾ ಕೃಷ್ಣರಾವ್- ಪ್ರವಾಸೋದ್ಯಮ ಇಲಾಖೆ ಪಿ.ಬಿ.ರಾಮಮೂರ್ತಿ- ಸಾರಿಗೆ ಇಲಾಖೆ, ಡಿ.ಎನ್.ನರಸಿಂಹರಾಜು- ಇಂಧನ ಇಲಾಖೆ, ಕೆ.ಶಿವರಾಂ- ಸಾರ್ವಜನಿಕ ಉದ್ದಿಮೆಗಳ ಇಲಾಖೆ ಎಂ.ಆರ್.ಕಾಂಬ್ಳೆ- ಕೃಷಿ ಇಲಾಖೆ ವಿ.ಮಂಜುಳಾ- ಪಶು ಸಂಗೋಪನೆ ಮತ್ತು ಮೀನುಗಾರಿಕೆ

ಕಾರ್ಯದರ್ಶಿಗಳು: ಕೆ.ಅಮರ ನಾರಾಯಣ- ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)
ವ್ಯವಸ್ಥಾಪಕ ನಿರ್ದೇಶಕರು: ಸಂದೀಪ್ ದವೆ- ರಾಜ್ಯ ಪಾನೀಯ ನಿಗಮ,ಎನ್.ಸಿ.ಮುನಿಯಪ್ಪ- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಎನ್.ಮಂಜುನಾಥ್‌ಪ್ರಸಾದ್- ಕೆಎಸ್‌ಆರ್‌ಟಿಸಿ, ಎನ್. ಶ್ರೀರಾಮನ್- ಮೈಸೂರು ಮಿನರಲ್ಸ್ ಲಿಮಿಟೆಡ್, ಎಂ.ಕೆ.ಬಲದೇವಕೃಷ್ಣ- ನಿರ್ದೇಶಕರು, ಯುವಜನ ಸೇವಾ ಇಲಾಖೆ, ಎಂ.ಇ.ಶಿವಲಿಂಗಮೂರ್ತಿ- ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,

ಎನ್.ಪ್ರಭಾಕರ್- ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ, ಬಿ.ಜಿ.ನಂದಕುಮಾರ್- ಹೆಚ್ಚುವರಿ ಆಯುಕ್ತರು (ಯೋಜನೆ), ಬಿಬಿಎಂಪಿ ಡಾ.ವಿ.ಚಂದ್ರಶೇಖರ್- ಆಯುಕ್ತರು ಮತ್ತು ಇನ್‌ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್, ನೋಂದಣಿ ಇಲಾಖೆ, ವಿ.ಪೊನ್ನುರಾಜ್- ಆಯುಕ್ತರು, ಭೂ ದಾಖಲೆಗಳ ಇಲಾಖೆ, ಬಿ.ಎನ್.ಕೃಷ್ಣಯ್ಯ- ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಉಜ್ವಲ್‌ಕುಮಾರ್ ಘೋಷ್-ಉಪಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿ.ಯಶವಂತ್- ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ, ಮುದ್ದುಮೋಹನ್ (ಕೆಎಎಸ್)- ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕೆಪಿಟಿಸಿಎಲ್

ಜಿಲ್ಲಾಧಿಕಾರಿಗಳು: ವಿ. ಅನ್ಬುಕುಮಾರ್- ಬೆಳಗಾವಿ, ಡಾ.ಕೆ.ಜಿ.ಜಗದೀಶ್- ರಾಯಚೂರು ಕೆ.ಪಿ.ಮೋಹನ್‌ರಾಜ್- ಶಿವಮೊಗ್ಗ, ಎಂ.ವಿ.ಸಾವಿತ್ರಿ- ಹಾಸನ

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು: ಪಿ.ರಾಜೇಂದ್ರ ಚೋಳನ್- ಕೋಲಾರ, ಮೀರ್ ಅನೀಸ್ ಅಹ್ಮದ್- ಬೀದರ್, ಅಬ್ದುಲ್ ರಬ್ (ಕೆಎಎಸ್)- ಯಾದಗಿರಿ ಗೋವಿಂದರಾಜು (ಆರ್‌ಡಿಪಿಆರ್)- ತುಮಕೂರು

ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಡಾ.ಪಿ.ರವೀಂದ್ರನಾಥ್- ಐಜಿಪಿ, ರಾಜ್ಯ ಮೀಸಲು ಪೊಲೀಸ್ ಪಡೆ,ಸುನಿಲ್ ಅಗರವಾಲ್, ಐಜಿಪಿ, ರಾಜ್ಯ ಮಾನವ ಹಕ್ಕುಗಳ ಆಯೋಗ ಕೆ.ಎಲ್.ಸುಧೀರ್- ಪೊಲೀಸ್ ಕಮಿಷನರ್ , ಮೈಸೂರು ನಗರ ಪಾಲ್ ಅಮೃತ್- ಡಿಐಜಿ, ಕೇಂದ್ರ ಕಚೇರಿ-1 ಸೈಯದ್ ಉಲ್ಫಾ ಹುಸೇನ್- ಡಿಐಜಿ, ಕೇಂದ್ರ ಕಚೇರಿ- 2 ಎಂ.ನಂಜುಂಡಸ್ವಾಮಿ- ಎಸ್‌ಪಿ (ರೈಲ್ವೆ), ಬೆಂಗಳೂರು, ದೇವಜ್ಯೋತಿ ರೇ- ಎಸ್‌ಪಿ (ಸಿಐಡಿ) ಬೆಂಗಳೂರು, ಎಸ್.ಬಿ.ಬಿಸನಳ್ಳಿ- ಎಸ್‌ಪಿ, ರಾಯಚೂರು, ವಿಕಾಸ್ ಕುಮಾರ್- ಎಸ್‌ಪಿ (ಗುಪ್ತಚರ) ಬೆಂಗಳೂರು, ಸಂದೀಪ್ ಪಾಟೀಲ್- ಬೆಳಗಾವಿ ಎಸ್‌ಪಿ ಆಗಿ ಮುಂದುವರಿಕೆ, ಆರ್.ದಿಲೀಪ್- ಎಸ್‌ಪಿ, ಮೈಸೂರು, ಕೆ.ತ್ಯಾಗರಾಜನ್- ಡಿಸಿಪಿ,  ಸಿಎಆರ್, ಕೇಂದ್ರ ಕಚೇರಿ, ಬೆಂಗಳೂರು ಎನ್.ಶಶಿಕುಮಾರ್- ಎಸ್‌ಪಿ, ಚಿಕ್ಕಮಗಳೂರು, ವೈ.ಎಸ್.ರವಿಕುಮಾರ್- ಎಸ್‌ಪಿ, ಧಾರವಾಡ ಅನುಪಮ್ ಅಗರವಾಲ್- ಎಸ್‌ಪಿ, ರಾಮನಗರ, ರಾಮ್‌ನಿವಾಸ್ ಸೆಪಟ್- ಎಸ್‌ಪಿ, ಕೋಲಾರಎಂ.ಬಿ.ಬೋರಲಿಂಗಯ್ಯ- ಎಸ್‌ಪಿ, ಉಡುಪಿ, ರೋಹಿಣಿ ಕಟೊಚ್- ಎಸ್‌ಪಿ, ಕೆಜಿಎಫ್ ರಾಜೇಂದ್ರ ಪ್ರಸಾದ್- ಎಸ್‌ಪಿ, ಚಾಮರಾಜನಗರ

ಬಡ್ತಿ ಪಡೆದವರು: ಹೇಮಂತ ನಿಂಬಾಳ್ಕರ್- ಡಿಐಜಿ (ಆಂತರಿಕ ಭದ್ರತೆ) ಬೆಂಗಳೂರು ಮನೀಷ್ ಕರ್ಬೀಕರ್- ಡಿಐಜಿ, ನಾಗರಿಕ ಸೇವಾ ಜಾರಿ ನಿರ್ದೇಶನಾಲಯ, ಬೆಂಗಳೂರು ರವೀಂದ್ರ ಪ್ರಸಾದ್- ಡಿಐಜಿ, ರಾಜ್ಯ ಮೀಸಲು ಪೊಲೀಸ್ ಪಡೆ, ಬೆಂಗಳೂರು ಬಿ.ಶಿವಕುಮಾರ್- ಡಿಐಜಿ, ನೇಮಕಾತಿ ಮತ್ತು ತರಬೇತಿ, ಬೆಂಗಳೂರು

ಐಎಫ್‌ಎಸ್: ಸಿ.ಡಿ.ದೇವಯ್ಯ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ಬಿ.ಎಂ.ಪರಮೇಶ್ವರ್- ಅರಣ್ಯ ಸಂರಕ್ಷಣಾಧಿಕಾರಿ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT