ADVERTISEMENT

ಅನಂತಮೂರ್ತಿಗೆ ‘ಬಸವ ಪುರಸ್ಕಾರ’

ಹಂಸಾನಂದಾಚಾರ್ಯ, ಲಕ್ಷ್ಮೀಬಾಯಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 20:35 IST
Last Updated 6 ಜನವರಿ 2014, 20:35 IST
ಅನಂತಮೂರ್ತಿಗೆ ‘ಬಸವ ಪುರಸ್ಕಾರ’
ಅನಂತಮೂರ್ತಿಗೆ ‘ಬಸವ ಪುರಸ್ಕಾರ’   

ಬೆಂಗಳೂರು: ರಾಜ್ಯ ಸರ್ಕಾರ ನೀಡುವ 2012ನೇ ಸಾಲಿನ ‘ಬಸವ ಪುರಸ್ಕಾರ’ಕ್ಕೆ ಹಿರಿಯ ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ, ‘ಜಕ­ಣಾ­­ಚಾರಿ ಪ್ರಶಸ್ತಿಗೆ’ ಬಳ್ಳಾರಿ ಜಿಲ್ಲೆಯ ಶಿಲ್ಪ ಕಲಾವಿದ ಜಿ.ಬಿ. ಹಂಸಾನಂದಾ­ಚಾರ್ಯ ಮತ್ತು ‘ಗುಬ್ಬಿ ವೀರಣ್ಣ’ ಪ್ರಶಸ್ತಿಗೆ ಧಾರವಾಡದ ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ  ಅವರನ್ನು ಆಯ್ಕೆ ಮಾಡಲಾಗಿದೆ.

ಬಸವ ಪುರಸ್ಕಾರ ₨ 10 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಜಕಣಾಚಾರಿ ಮತ್ತು ಗುಬ್ಬಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ₨ 3 ಲಕ್ಷ ನಗದು ಹಾಗೂ ಸ್ಮರಣಿಕೆ, ಪ್ರಶಸ್ತಿ ಫಲಕ ನೀಡ­ಲಾಗುವುದು  ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಪುರಸ್ಕೃತರ ಆಯ್ಕೆಗೆ ಕ್ರಮ­ವಾಗಿ ರಂಜಾನ್‌ ದರ್ಗಾ, ಕನಕಾ ಮೂರ್ತಿ, ಎಲ್‌.ಬಿ.ಕೆ. ಅಲ್ದಾಳ್‌ ಅಧ್ಯಕ್ಷತೆಯ ಸಮಿತಿ  ರಚಿಸಲಾಗಿತ್ತು.   

ಇನ್ನಷ್ಟು ಸುದ್ದಿ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.