ADVERTISEMENT

ಅನಾಥರು, ವಿಧವೆಯರಿಗೆ ಮೀಸಲಾತಿ

ಮಹಿಳಾ ವಿಶ್ವವಿದ್ಯಾಲಯ ಪ್ರವೇಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:59 IST
Last Updated 10 ಸೆಪ್ಟೆಂಬರ್ 2013, 19:59 IST

ವಿಜಾಪುರ: ಇಲ್ಲಿಯ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರವೇಶ ದಲ್ಲಿ ಅನಾಥೆಯರು, ವಿಧವೆಯರು, ಸೇನಾ ಕಾರ್ಯಾಚರಣೆಯಲ್ಲಿ ಮೃತ ರಾದ ಯೋಧರ ಪುತ್ರಿಯರಿಗೆ ತಲಾ ಒಂದು ಸೀಟು ಕಾಯ್ದಿರಿಸಲು ನಿರ್ಧರಿಸ ಲಾಗಿದೆ.

‘ವಿವಿಯ ಎಲ್ಲ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಈ ವರ್ಗದ ಮಕ್ಕಳಿಗೆ ತಲಾ ಒಂದೊಂದು ಸ್ಥಾನ ಮೀಸಲಿಡಲು ಮಹಿಳಾ ವಿವಿಯ ಸಿಂಡಿಕೇಟ್‌ ಹಾಗೂ ಅಕಾಡೆಮಿಕ್‌ ಕೌನ್ಸಿಲ್‌ ಒಪ್ಪಿಗೆ ನೀಡಿದೆ. ಇಬ್ಬರು ಅನಾಥೆಯರಿಗೆ ಈ ಬಾರಿ ಪ್ರವೇಶ ನೀಡಲಾಗಿದ್ದು, ಬರುವ ಶೈಕ್ಷಣಿಕ ಸಾಲಿನಿಂದ ಈ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲಾ ಗುವುದು’ ಎಂದು ಕುಲಪತಿ ಪ್ರೊ.ಮೀನಾ ಆರ್‌. ಚಂದಾವರಕರ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಿಳಾ ವಿವಿಯ ಅಂಚೆ ತೆರಪಿನ ಕೋರ್ಸ್‌ಗಳಿಗೆ ದೂರ ಶಿಕ್ಷಣ ಮಂಡಳಿಯಿಂದ ಅನುಮೋದನೆ ದೊರೆತಿದೆ. ಬಿ.ಎ ಇಂಗ್ಲಿಷ್‌, ಬಿ.ಕಾಂ, ಬಿ.ಎಸ್.ಡಬ್ಲ್ಯು, ಬಿ.ಸಿ.ಎ, ಬಿ.ಬಿ.ಎ, ಇಂಗಿ್ಲಷ್‌, ಕನ್ನಡ, ಸಮಾಜಶಾಸ್ತ್ರ, ರಾಜಶಾಸ್ತ್ರ, ಅರ್ಥಶಾಸ್ತ್ರ, ಮಹಿಳಾ ಅಧ್ಯಯನ ವಿಷಯಗಳಲ್ಲಿ ಎಂ.ಎ. ಪದವಿ ಹಾಗೂ ಎಂ.ಕಾಂ., ಎಂ.ಬಿ.ಎ ಮಾರ್ಕೆಟಿಂಗ್‌, ಫೈನಾನ್ಸ್‌, ಮಾನವ ಸಂಪನ್ಮೂಲ ಅಭಿವೃದ್ಧಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಲು ಅನುಮೋದನೆ ದೊರೆತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT