ADVERTISEMENT

ಅಭಿನವ ಬಸವಪ್ರಭು ಸ್ವಾಮೀಜಿ ಕೇತೇಶ್ವರ ಮಠದ ಪೀಠಾಧಿಪತಿ

ಕಾರ್ಯಕ್ರಮಕ್ಕೆ ಗೈರು ಹಾಜರಾದ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:45 IST
Last Updated 10 ಡಿಸೆಂಬರ್ 2018, 20:45 IST
ಅಭಿನವ ಬಸವಪ್ರಭು ಕೇತೇಶ್ವರ ಸ್ವಾಮೀಜಿ
ಅಭಿನವ ಬಸವಪ್ರಭು ಕೇತೇಶ್ವರ ಸ್ವಾಮೀಜಿ   

ಚಿತ್ರದುರ್ಗ: ಇಲ್ಲಿನ ಸೀಬಾರದಲ್ಲಿರುವ ಮೇದಾರ ಕೇತೇಶ್ವರ ಮಠದ ನೂತನ ಪೀಠಾಧಿಪತಿಯಾಗಿ 21ರ ಹರೆಯದ ಬಿ. ಮಂಜುನಾಥ ಅವರನ್ನು ನೇಮಿಸಲಾಯಿತು. ಪೂರ್ವಾಶ್ರಮದ ಅವರ ಹೆಸರನ್ನು ಬದಲಿಸಿ ಅಭಿನವ ಬಸವಪ್ರಭುಕೇತೇಶ್ವರ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು.

ಹನುಮಂತಯ್ಯ ಕೇತೇಶ್ವರ ಸ್ವಾಮೀಜಿ ಅವರ 30ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ನೂತನ ಪೀಠಾಧಿಪತಿಯ ಹೆಸರನ್ನುಅಖಿಲ ಕರ್ನಾಟಕ ಶ್ರೀಗುರು ಮೇದಾರ ಕೇತೇಶ್ವರ ಟ್ರಸ್ಟ್ ಘೋಷಣೆ ಮಾಡಿತು. ಬಸವಪ್ರಭು ಕೇತೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದರಿಂದ ನಾಲ್ಕು ವರ್ಷಗಳಿಂದ ಪೀಠಾಧಿಪತಿ ನೇಮಕ ಆಗಿರಲಿಲ್ಲ.

ಮಂಜುನಾಥ ಅವರನ್ನೇ ಮುಂದಿನ ಪೀಠಾಧಿಪತಿಯನ್ನಾಗಿ ನೇಮಕ ಮಾಡಬೇಕು ಎಂದು ಬಸವಪ್ರಭು ಕೇತೇಶ್ವರ ಸ್ವಾಮೀಜಿ ನಾಲ್ಕು ವರ್ಷಗಳ ಹಿಂದೆ ಬರೆದಿಟ್ಟಿದ್ದ ಒಪ್ಪಿಗೆ ಕರಾರು ಪತ್ರವನ್ನು (ವಿಲ್) ಟ್ರಸ್ಟ್‌ ಅಧ್ಯಕ್ಷಸಿ.ಪಿ. ಪಾಟೀಲ್ ಓದಿದಾಗ ಭಕ್ತರು ಕರತಾಡನ ಮಾಡಿ ಒಪ್ಪಿಗೆ ಸೂಚಿಸಿದರು.

ADVERTISEMENT

ಬಿಳಿ ಬಟ್ಟೆ ಧರಿಸಿದ್ದ ನೂತನ ಪೀಠಾಧಿಪತಿಗೆ ಇತರಮಠಗಳ ಸ್ವಾಮೀಜಿಗಳು ರುದ್ರಾಕ್ಷಿ ಮಾಲೆ ಹಾಕಿದರು. ಇಷ್ಟಲಿಂಗ ನೀಡಿ, ಪುಷ್ಪ ವೃಷ್ಟಿ ಮಾಡಿದರು. ಬಳಿಕ ಬಸವಪ್ರಭು ಸ್ವಾಮೀಜಿ ಖಾವಿ ಧರಿಸಿ, ವೇದಿಕೆ ಏರಿ ಹಿರಿಯ ಸ್ವಾಮೀಜಿಗಳಿಗೆ ಉದ್ದಂಡ ನಮಸ್ಕಾರ ಮಾಡಿದರು.

ನೂತನ ಪೀಠಾಧಿಪತಿ ನೇಮಕಕ್ಕೆ ಮುರುಘಾ ಮಠದ ಮುರುಘಾ ಶರಣರು ಸಮ್ಮತಿ ನೀಡಿಲ್ಲ. ಅಭಿನವ ಬಸವಪ್ರಭು ಸ್ವಾಮೀಜಿಗೆ ದೀಕ್ಷೆ ನೀಡುವಂತೆ ಮುರುಘಾ ಶರಣರ ಮನವೊಲಿಸಲು ಎಲ್ಲ ಸ್ವಾಮೀಜಿಗಳು ಸಲಹೆ ನೀಡಿದರು. ಕಾರ್ಯಕ್ರಮಕ್ಕೆ ಮುರುಘಾ ಶರಣರು ಗೈರು ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.