ADVERTISEMENT

ಅರಣ್ಯ ಒತ್ತುವರಿದಾರರ ಬೃಹತ್‌ ಪ್ರತಿಭಟನೆ

ಹಕ್ಕು ಪತ್ರಕ್ಕೆ ಆಗ್ರಹ; ಸ್ವಯಂ ಪೊಲೀಸ್‌ ಬಂಧನಕ್ಕೆ ಒಳಗಾದ ಪ್ರತಿಭಟನಾಕಾರರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:16 IST
Last Updated 2 ಮಾರ್ಚ್ 2019, 20:16 IST
ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕುಮಟಾದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅರಣ್ಯ ಅತಿಕ್ರಮಣಕಾರರು
ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಕುಮಟಾದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅರಣ್ಯ ಅತಿಕ್ರಮಣಕಾರರು   

ಕುಮಟಾ (ಉತ್ತರ ಕನ್ನಡ): ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಸಾವಿರಾರು ಪ್ರತಿಭಟನಾಕಾರರು, ಪ್ರಖರ ಬಿಸಿಲಿನಲ್ಲೂ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಸ್ವಯಂ ಪೊಲೀಸ್ ಬಂಧನಕ್ಕೆ ಒಳಗಾದರು.

ಇದಕ್ಕೂ ಮೊದಲು ಮಣಕಿ ಮೈದಾನದಲ್ಲಿ ಬಹಿರಂಗ ಸಮಾವೇಶ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದಅರಣ್ಯ ಅತಿಕ್ರಮಣ ಹೋರಾಟಗಾರರ ಸಂಘಟನೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಒತ್ತುವರಿದಾರರಿಗೆ ಹಕ್ಕುಪತ್ರ ಕೊಡದಿರುವ ಸರ್ಕಾರಗಳ ನಡೆಯನ್ನು ಖಂಡಿಸಿದರು.ಅಲ್ಲದೇಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ADVERTISEMENT

‘ಅರಣ್ಯ ಅತಿಕ್ರಮಣಕಾರರು ಭಯೋತ್ಪಾದಕರಲ್ಲ, ನಕ್ಸಲರೂ ಅಲ್ಲ. ಆದರೆ, ನಾವು ಅತಿಕ್ರಮಣ ಮಾಡಿಕೊಂಡ ನೆಲಕ್ಕೆ ಕೈಹಾಕಲುಬಂದರೆ ಅತ್ಯುಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ. ಅತಿಕ್ರಮಣಕಾರರು ಪ್ರಾಣ ಬಿಟ್ಟಾರೆಯೇ ವಿನಾ ಭೂಮಿ ಬಿಡರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ಸಂಸದರು ಹಾಗೂ ಇಬ್ಬರು ಶಾಸಕರು, 113 ಜನ ಇತರ ಜನಪ್ರತಿನಿಧಿಗಳು ಅರಣ್ಯ ಅತಿಕ್ರಮಣ ನಡೆಸಿದ್ದಾರೆ’ ಎಂದು ಯಾರ ಹೆಸರನ್ನೂ ಹೇಳದೆ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.