ADVERTISEMENT

ಆಂಧ್ರಪ್ರದೇಶಕ್ಕೆ ಮಾದರಿಯಾದ ಇಂದಿರಾ ಕ್ಯಾಂಟೀನ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 19:55 IST
Last Updated 5 ನವೆಂಬರ್ 2017, 19:55 IST
ಆಂಧ್ರಪ್ರದೇಶ ಸರ್ಕಾರದ ಪೌರಾಡಳಿತ ನಿರ್ದೇಶಕ ಕನ್ನಬಾಬು (ಎಡದಿಂದ ನಾಲ್ಕನೆಯವರು) ನೇತೃತ್ವದ ನಿಯೋಗಕ್ಕೆ ಇಂದಿರಾ ಕ್ಯಾಂಟೀನ್‌ ಬಗ್ಗೆ ವಿವರ ನೀಡುತ್ತಿರುವ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ (ಎಡದಿಂದ ಐದನೆಯವರು)
ಆಂಧ್ರಪ್ರದೇಶ ಸರ್ಕಾರದ ಪೌರಾಡಳಿತ ನಿರ್ದೇಶಕ ಕನ್ನಬಾಬು (ಎಡದಿಂದ ನಾಲ್ಕನೆಯವರು) ನೇತೃತ್ವದ ನಿಯೋಗಕ್ಕೆ ಇಂದಿರಾ ಕ್ಯಾಂಟೀನ್‌ ಬಗ್ಗೆ ವಿವರ ನೀಡುತ್ತಿರುವ ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ (ಎಡದಿಂದ ಐದನೆಯವರು)   

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್ ಯೋಜನೆ ಆಂಧ್ರಪ್ರದೇಶಕ್ಕೆ ಮಾದರಿಯಾಗಿದ್ದು, ಅಲ್ಲಿನ ಅಧಿಕಾರಿಗಳು ಬಂದು ವೀಕ್ಷಣೆ ಮಾಡಿದ್ದಾರೆ.

ಆಂಧ್ರಪ್ರದೇಶದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಕನ್ನಬಾಬು ಹಾಗೂ ಅನಂತಪುರಂ, ಕರ್ನೂಲ್, ಚಿತ್ತೂರು ಜಿಲ್ಲೆಗಳ ಪೌರಾಡಳಿತ ಆಯುಕ್ತರು ಮತ್ತು ಅಧಿಕಾರಿಗಳ ತಂಡ ಬೆಂಗಳೂರಿಗೆ ಬಂದು ಇಂದಿರಾ ಕ್ಯಾಂಟೀನ್ ಸ್ಥಾಪನೆ ಬಗ್ಗೆ ಅಧ್ಯಯನ ನಡೆಸಿದರು.

ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್‌ ರಾಜನ್ ಅವರು ಆಂಧ್ರದ ನಿಯೋಗಕ್ಕೆ ಇಂದಿರಾ ಕ್ಯಾಂಟೀನ್, ಅಡುಗೆ ಮನೆಗಳು,  ಆಹಾರ ತಯಾರಿಕೆಗೆ ಬೇಕಾದ ಪರಿಕರಗಳು ಮತ್ತು ಆಹಾರ ಪೂರೈಕೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಕೆಲವು ಕ್ಯಾಂಟೀನ್‌ಗಳಿಗೂ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ಸಿಬ್ಬಂದಿ ಸಮವಸ್ತ್ರ, ಆಹಾರ ವಿತರಣೆ, ಕುಡಿಯುವ ನೀರಿನ ಸೌಲಭ್ಯದ ಬಗ್ಗೆಯೂ ಮಾಹಿತಿ ಪಡೆದರು.

ADVERTISEMENT

‘ಆಂಧ್ರಪ್ರದೇಶ ಸರ್ಕಾರ 2016ರಲ್ಲಿ ಇಂತಹದ್ದೇ ಮಾದರಿಯಲ್ಲಿ ಕ್ಯಾಂಟೀನ್ ಆರಂಭಿಸುವ ಬಗ್ಗೆ ಘೋಷಣೆ ಮಾಡಿತ್ತು. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಜಾರಿ ಆಗಲಿಲ್ಲ. ಈ ಸಂಬಂಧ ಇಂದಿರಾ ಕ್ಯಾಂಟೀನ್‌ನ ಕಾರ್ಯವಿಧಾನದ ಬಗ್ಗೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಕನ್ನಬಾಬು ಈ ಸಂದರ್ಭದಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.