ADVERTISEMENT

ಆಗುಂಬೆಯಲ್ಲಿ 13 ಸೆಂ.ಮೀ ಮಳೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ಬೆಂಗಳೂರು: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ಆಗುಂಬೆಯಲ್ಲಿ 13 ಸೆಂ.ಮೀ ಮಳೆಯಾಗಿದೆ.

ಶೃಂಗೇರಿ 9, ಕೊಲ್ಲೂರು, ನೀಲ್ಕುಂದ, ಕ್ಯಾಸಲ್ ರಾಕ್, ಜಯಪುರ, ಕಮ್ಮರಡಿ 6, ಧರ್ಮಸ್ಥಳ, ಸುಬ್ರಹ್ಮಣ್ಯ, ಸಿದ್ದಾಪುರ, ಔರಾದ್, ಮಡಿಕೇರಿ, ತಾಳಗುಪ್ಪ, ತೀರ್ಥಹಳ್ಳಿ, ಸಕಲೇಶಪುರ 5, ಬೆಳ್ತಂಗಡಿ, ಕದ್ರಾ, ನಾಪೋಕ್ಲು, ವಿರಾಜಪೇಟೆ, ಮಾದಾಪುರ, ಸೋಮವಾರಪೇಟೆ, ಕೊಟ್ಟಿಗೆಹಾರ, ಕೊಪ್ಪ, ಹೆಸರಘಟ್ಟ 4, ಮೂಡುಬಿದಿರೆ, ಮೂಲ್ಕಿ, ಮಾಣಿ, ಉಪ್ಪಿನಂಗಡಿ, ಕೋಟ, ಭಟ್ಕಳ, ಮಂಚಿಕೇರಿ, ಜೋಯಿಡಾ, ರಾಯಚೂರು, ಲಿಂಗನಮಕ್ಕಿ, ಕಳಸ, ಬಾಳೆಹೊನ್ನೂರು, ಮೈಸೂರು 3,

ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಉಡುಪಿ, ಕಾರ್ಕಳ, ಶಿರಾಲಿ, ಗೋಕರ್ಣ, ಲೋಂಡ, ಯಲಬುರ್ಗ, ಹಾರಂಗಿ, ಸಾಗರ, ತ್ಯಾಗರ್ತಿ, ಹೊಸನಗರ, ಮೂಡಿಗೆರೆ, ಚಿಕ್ಕಮಗಳೂರು, ಹಾಸನ, ತಿ.ನರಸೀಪುರ, ರಾಯಲ್ಪಾಡು, ಯಲಹಂಕ, ಕಂಪ್ಲಿ 2, ಪಣಂಬೂರು, ಹೊನ್ನಾವರ, ಕುಮಟಾ, ಸಿದ್ದಾಪುರ (ಉ.ಕ), ಖಾನಾಪುರ, ಬೇವೂರು, ಮುಧೋಳ, ಬಸವನ ಬಾಗೇವಾಡಿ, ಬೀದರ್, ಭಾಲ್ಕಿ, ಆಳಂದ, ಕಮಲಾಪುರ, ಚಿಂಚೋಳಿ, ಮೂರ್ನಾಡು, ಪೊನ್ನಂಪೇಟೆ, ಕುಶಾಲನಗರ, ಹುಂಚದಕಟ್ಟೆ, ಭದ್ರಾವತಿ, ಎನ್.ಆರ್.ಪುರ, ಅಜ್ಜಂಪುರ, ಲಿಂಗದಹಳ್ಳಿ, ತರೀಕೆರೆ, ಪಿರಿಯಾಪಟ್ಟಣ, ಹುಣಸೂರು, ಎಚ್.ಡಿ.ಕೋಟೆ, ಸರಗೂರು, ಬೆಂಗಳೂರು ನಗರ, ಸಿರಗುಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.