ADVERTISEMENT

ಆಚಾರ್ಯರ ಮದ್ದು ರಾಮಬಾಣ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಉಡುಪಿ: ಡಾ. ವಿ.ಎಸ್.ಆಚಾರ್ಯ ಅವರು ರಾಜಕಾರಣಕ್ಕೂ ಬರುವ ಮುಂಚೆ ವೈದ್ಯರಾಗಿದ್ದವರು. ಮಲ್ಪೆ ಮಾರ್ಗದ ಕಲ್ಮಾಡಿಯಲ್ಲಿ ಗೀತಾ ಕ್ಲಿನಿಕ್ ಆರಂಭಿಸಿ 46 ವರ್ಷ ರೋಗಿಗಳ ಶುಶ್ರೂಷೆ ಮಾಡಿದ್ದರು. ಆ ಮೂಲಕ ಕಿದಿಯೂರು, ಕಡೆಕಾರು, ಕಲ್ಮಾಡಿ ವ್ಯಾಪ್ತಿಯಲ್ಲಿ ಅವರು ಜನಾನುರಾಗಿಯಾಗಿದ್ದರು.

`ಆಚಾರ್ಯರು ಮದ್ದು ರಾಮಬಾಣದಂತಿರುತ್ತಿತ್ತು. ಎಂಥ ರೋಗವನ್ನೂ ಗುಣಪಡಿಸುತ್ತಿತ್ತು~ ಎಂದು ಈ ಭಾಗದ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಆಚಾರ್ಯರು ಪ್ರಸೂತಿ ನಡೆಸುವುದರಲ್ಲಿಯೂ ಹೆಸರು ಗಳಿಸಿದ್ದರು. ರಾಜಕೀಯ ಪ್ರವೇಶಿಸಿದ ಬಳಿಕ ರಾಜಕಾರಣದ ಒತ್ತಡದಲ್ಲಿ ಅವರ ಕ್ಲಿನಿಕ್ ಭೇಟಿ ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.