ADVERTISEMENT

ಆಮ್ಲಜನಕ ಕೊರತೆ: 7 ಕಾರ್ಮಿಕರು ಅಸ್ವಸ್ಥ

ಮಾರುತಿ ಪವರ್ ಜೆನ್ ಜಲವಿದ್ಯುತ್ ಯೋಜನೆ ಸುರಂಗ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2017, 19:30 IST
Last Updated 19 ಅಕ್ಟೋಬರ್ 2017, 19:30 IST

ಸಕಲೇಶಪುರ: ಪಶ್ಚಿಮಘಟ್ಟದ ಕಾಗಿನಹರೆ ರಕ್ಷಿತ ಅರಣ್ಯದಲ್ಲಿ ನಿರ್ಮಾಣವಾಗುತ್ತಿರುವ ಮಾರುತಿ ಪವರ್ ಜೆನ್ ಜಲವಿದ್ಯುತ್ ಯೋಜನೆಯ ಸುರಂಗ ಕಾಮಗಾರಿ ಮಾಡುತ್ತಿದ್ದ ವೇಳೆ ಆಮ್ಲಜನಕ ಕೊರತೆಯಿಂದ 7 ಕಾರ್ಮಿಕರು ಬುಧವಾರ ಅಸ್ವಸ್ಥಗೊಂಡರು.

ಜಾರ್ಖಂಡ್‌ನ ಸುನಿಲ್ (25), ಜಗ್ಗು (30), ಪ್ರೀತಮ್ (35), ಮಹೇಂದ್ರ (30) ಮುಲ್ಲಿ ಹರೀಶ್ (40), ದೇವಾನಂದ (50) ಹಾಗೂ ಕೇರಳದ ಬಾಲಕೃಷ್ಣ (35) ಅವರಿಗೆ ತಾಲ್ಲೂಕು ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಿ, ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು.

ದಟ್ಟ ಮಳೆಕಾಡಿನ ಬೆಟ್ಟವನ್ನು ಸೀಳಿ ಸುರಂಗದ ಮೂಲಕ ನೀರು ಹರಿಸಿ ವಿದ್ಯುತ್‌ ಉತ್ಪಾದನೆ ಮಾಡಲು ಕಾಮಗಾರಿ ನಡೆಯುತ್ತಿದೆ. ನೂರಾರು ಅಡಿಗಳಷ್ಟು ದೂರ ಕೊರೆದಿರುವ ಸುರಂಗದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.