ADVERTISEMENT

ಇಂಡಿಯನ್‌ ಮುಜಾಹಿದೀನ್‌ ಜೊತೆ ನಂಟು; ಮೂವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 11:07 IST
Last Updated 12 ಏಪ್ರಿಲ್ 2017, 11:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಇಂಡಿಯನ್‌ ಮುಜಾಹಿದ್ದೀನ್‌ ಭಯೋತ್ಪಾದಕ ಸಂಘಟನೆಯ ಜೊತೆ ನಂಟು ಹೊಂದಿರುವುದು ಮತ್ತು ಭಯೋತ್ಪಾದನಾ ಚಟುವಟಿಕೆ ನಡೆಸುವ ಉದ್ದೇಶದಿಂದ ಸ್ಫೋಟಕಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಅಪರಾಧಕ್ಕಾಗಿ ಮೂವರಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

2008ರಲ್ಲಿ ಸೂರತ್‌ ಮತ್ತು ಅಹಮ್ಮದಾಬಾದ್‌ ನಗರಗಳಲ್ಲಿ ನಡೆದಿದ್ದ ಸರಣಿ ಸ್ಫೋಟಗಳ ಪ್ರಮುಖ ಆರೋಪಿಯಾಗಿರುವ ಸಯೀದ್‌ ಮೊಹಮ್ಮದ್ ನೌಶಾದ್‌, ಆತನ ಸಹಚರರಾಗಿದ್ದ ಅಹಮ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್‌ ಅಹಮ್ಮದ್ ಅಲಿಯಾಸ್‌ ಫಕೀರ್‌ ಶಿಕ್ಷೆಗೊಳಗಾದವರು.

ಈ ಪ್ರಕರಣದಲ್ಲಿ ಮೂವರೂ ಅಪರಾಧಿಗಳು ಎಂದು ನ್ಯಾಯಾಲಯ ಸೋಮವಾರ ತೀರ್ಮಾನ ಪ್ರಕಟಿಸಿತ್ತು.

ADVERTISEMENT

ಶಿಕ್ಷೆಯ ಪ್ರಮಾಣ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್‌.ಎಚ್‌.ಪುಷ್ಪಾಂಜಲಿ ದೇವಿ, ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿ ಅಂತಿಮ ಆದೇಶ ಹೊರಡಿಸಿದರು.

ಜೀವಾವಧಿ ಶಿಕ್ಷೆಯ ಜೊತೆಗೆ ನೌಶಾದ್‌ಗೆ ₹ 26,000 ದಂಡ ವಿಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗೆ ತಲಾ ₹ 18,000 ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.