ADVERTISEMENT

ಇನ್ನು ಟಿಕೆಟ್ ರಹಿತ ಪ್ರಯಾಣವೂ ಸಾಧ್ಯ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಬೆಂಗಳೂರು: `ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ~ ಎಂಬ ಎಚ್ಚರಿಕೆಯ ಬರಹ ಹಳೆಯದಾಗುತ್ತಿದೆ. ಮುದ್ರಿತ ಟಿಕೆಟ್‌ನ ಅಗತ್ಯವೇ ಇಲ್ಲದೆ ಪ್ರಯಾಣಿಸುವ ಅವಕಾಶವನ್ನು ಕೆಎಸ್‌ಆರ್‌ಟಿಸಿ ಈಗ ಕಲ್ಪಿಸಿದೆ!

ಪ್ರಯಾಣಿಕರು ಇಂಟರ್‌ನೆಟ್ ಸೌಲಭ್ಯ ಇರುವ ತಮ್ಮ ಮೊಬೈಲ್ ಮೂಲಕ www.ksrtc.in/mobile ಅಥವಾ  http://m.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಇದನ್ನು ಒಂದು ಬಾರಿ ಮಾಡಿದರೆ ಸಾಕು.

ನೋಂದಾಯಿತ ಬಳಕೆದಾರರು  ಮೊಬೈಲ್ ಮೂಲಕವೇ ಟಿಕೆಟ್ ಕಾಯ್ದಿರಿಸಬಹುದು. ಟಿಕೆಟ್ ಕಾಯ್ದಿರಿಸಿದ ತಕ್ಷಣ ಮೊಬೈಲ್‌ಗೆ ಎಸ್‌ಎಂಎಸ್ ಸಂದೇಶ ಬರುತ್ತದೆ. ಇದರಲ್ಲಿ ಪ್ರಯಾಣದ ಎಲ್ಲ ಮಾಹಿತಿಗಳು ಇರುತ್ತವೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಟಿಕೆಟ್ ಕಾಯ್ದಿರಿಸಿದವರು ಪ್ರಯಾಣದ ಸಂದರ್ಭ ತಮ್ಮ ಮೊಬೈಲ್‌ನಲ್ಲಿರುವ ಎಸ್‌ಎಂಎಸ್ ಸಂದೇಶವನ್ನು ತೋರಿಸಬೇಕು. ಜೊತೆಗೊಂದು ಗುರುತಿನ ಚೀಟಿಯನ್ನೂ ಹೊಂದಿರಬೇಕು ಎಂದು ಪ್ರಕಟಣೆ ತಿಳಿಸಿದೆ.
ಹೊಸ ಬಸ್: ನಿಗಮವು ಬೆಂಗಳೂರಿನಿಂದ ಮಂತ್ರಾಲಯ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ಸದಲಗಾಕ್ಕೆ ಹೊಸ ಬಸ್ಸುಗಳನ್ನು ಪರಿಚಯಿಸಲಿದೆ.

ಬೆಂಗಳೂರು - ಮಂತ್ರಾಲಯ ಮಾರ್ಗದಲ್ಲಿ ಹವಾನಿಯಂತ್ರಿತ ಅಂಬಾರಿ ಸ್ಲೀಪರ್ ಬಸ್ಸು ಬುಧವಾರದಿಂದಲೇ ಆರಂಭವಾಗಿದೆ.

ಬೆಂಗಳೂರು - ಮಂಗಳೂರು (ಪುತ್ತೂರು ಮಾರ್ಗವಾಗಿ), ಬೆಂಗಳೂರು - ಸದಲಗಾ (ಬೆಳಗಾವಿ ಮಾರ್ಗವಾಗಿ) `ಐರಾವತ~ ಬಸ್ಸುಗಳು ಇದೇ 9ರಿಂದ ಆರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 7760990562, 7760990561 ಅಥವಾ 080-22870099 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.