ADVERTISEMENT

ಈ ಸಮ್ಮೇಳನವು ನನಗೆ ಸೊಗಸಾದ ಅನುಭವ ನೀಡಿದೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 19:20 IST
Last Updated 5 ಫೆಬ್ರುವರಿ 2011, 19:20 IST

ಬೆಂಗಳೂರು: ‘ಈ ಸಮ್ಮೇಳನವು ನನಗೆ ಸೊಗಸಾದ ಅನುಭವ ನೀಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆಗಳು’ ಎಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ನುಡಿದರು.

‘ಸಮ್ಮೇಳನಾಧ್ಯಕ್ಷರೊಡನೆ ಸಂವಾದ’ದಲ್ಲಿ ಮಾತನಾಡಿದ ಅವರು, ‘ನಿನ್ನೆ ನಡೆದ  ಮೆರವಣಿಗೆಯ ಮೂಲಕ ಬೆಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಕನ್ನಡ ಪ್ರೀತಿಸುವವರು ಇದ್ದಾರೆಂಬುದು ಜಗತ್ತಿಗೇ ಗೊತ್ತಾಯಿತು’ ಎಂದರು.

‘ಸಮ್ಮೇಳನ ಇನ್ನೂ ಚೆನ್ನಾಗಿ ನಡೆಯಬೇಕಾದರೆ ಎಲ್ಲ ಗೋಷ್ಠಿಗಳು ಮುಖ್ಯವಾದ ಒಂದೇ ವೇದಿಕೆಯಲ್ಲಿ ನಡೆಯಬೇಕು. 15ರಿಂದ 17 ಗೋಷ್ಠಿಗಳನ್ನು ಒಂದು ವಾರ ನಡೆಸಬೇಕಾಗುತ್ತದೆ. ಮೂರು ದಿನಗಳ ಕಾಲ ಸಮ್ಮೇಳನ ನಡೆಸುವುದೇ ಕಷ್ಟ. ವಾಸ್ತವವಾಗಿ ಒಂದು ವಾರ ಕಾಲ ಸಮ್ಮೇಳನ ನಡೆಸಲು ಕಷ್ಟ ಸಾಧ್ಯ’ ಎಂದು ಅವರು ಹೇಳಿದರು.

‘ನಾನು ಎಂಎ ವ್ಯಾಸಂಗ ಮಾಡುವ ಸಂದರ್ಭದಲ್ಲೇ ನಿಘಂಟು ರಚನಾ ಕಾರ್ಯದಲ್ಲಿ ತೊಡಗಿಸಿಕೊಂಡೆ. ಜಗತ್ತಿನ ಅತ್ಯುತ್ತಮ ನಿಘಂಟು ಎನಿಸಿಕೊಂಡಿರುವ ‘ಆಕ್ಸ್‌ಫರ್ಡ್ ಯೂನಿವರ್ಸಿಟಿ ಡಿಕ್ಷನರಿ’ಯೇ ನನಗೆ ಮಾರ್ಗದರ್ಶಿ’ ಎಂದು ಹೇಳಿದ ಅವರು, ‘ಶಬ್ಧಗಳಿದ್ದರೆ ನಿಘಂಟು ರಚಿಸುವುದು ಸರಿ. ಇಂಗ್ಲಿಷ್‌ನಲ್ಲಿ ಇದೆ ಎಂಬ ಕಾರಣಕ್ಕೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ನಿಘಂಟುಗಳನ್ನು ಕನ್ನಡಕ್ಕೆ ಅನುವಾದಿಸುವುದರಲ್ಲಿ ಯಾವ ಅರ್ಥವೂ ಇಲ್ಲ’ ಎಂದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT