ADVERTISEMENT

ಉತ್ತರ ಒಳನಾಡಿನಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.

ಆನವಟ್ಟಿಯಲ್ಲಿ 9 ಸೆಂ.ಮೀ. ಮಳೆಯಾಗಿದೆ. ಬಸವನ ಬಾಗೇವಾಡಿ 7, ಚಿಟಗುಪ್ಪ, ಕಡೂರು, ಚಳ್ಳಕೆರೆ 6, ಕೊಲ್ಲೂರು, ಕಮಲಾಪುರ 5, ಹುಮನಾಬಾದ್‌, ಕೊಟ್ಟಿಗೆಹಾರ 4, ಉಡುಪಿ, ಗೋಕರ್ಣ, ಚಿಕ್ಕೋಡಿ, ಹಿರೇಕೆರೂರು, ಕಾರಟಗಿ, ಬಾಗಲಕೋಟೆ, ದೇವರಹಿಪ್ಪರಗಿ, ಹುಣಸಗಿ, ನಾರಾಯಣಪುರ, ಮಾನ್ವಿ 3, ಗೇರುಸೊಪ್ಪ, ಕುಮಟಾ, ಅಂಕೋಲಾ, ಸಿದ್ದಾಪುರ (ಉ.ಕ), ಕಾರವಾರ, ರಾಮದುರ್ಗ, ಹಾನಗಲ್‌, ಗುಳೇದಗುಡ್ಡ, ವಿಜಾಪುರ, ಗುಲ್ಬರ್ಗ, ಕಕ್ಕೇರಿ, ಕೆಂಭಾವಿ, ರಾಯಚೂರು, ಭಾಗಮಂಡಲ, ಸಾಗರ, ಅರಸಾಳು, ಮೂಡಿಗೆರೆ, ಹರಿಹರ, ಭರಮಸಾಗರ, ಗೌರಿಬಿದನೂರು, ಪಾವಗಡ 2, ಕೋಟ, ಕುಂದಾಪುರ, ಸಿದ್ದಾಪುರ, ಹೊನ್ನಾವರ, ಭಟ್ಕಳ, ಸಂಕೇಶ್ವರ, ಅಥಣಿ, ಬಾದಾಮಿ, ಲೋಕಾಪುರ, ಬಸವಕಲ್ಯಾಣ, ಅಫಜಲಪುರ, ಶೋರಾಪುರ, ಶಹಾಪುರ, ಸಿಂಧನೂರು, ಮಡಿಕೇರಿ, ಪೊನ್ನಂಪೇಟೆ, ಲಿಂಗನಮಕ್ಕಿ, ತ್ಯಾಗರ್ತಿ, ಹೊಸನಗರ, ತೀರ್ಥಹಳ್ಳಿ, ಶಿರಾಳಕೊಪ್ಪ, ಲಿಂಗದಹಳ್ಳಿ, ಹೊಸಹಳ್ಳಿ, ಸಂಡೂರು, ಸಂತೆಬೆನ್ನೂರು, ಉಚ್ಚಂಗಿದುರ್ಗ, ಬರಗೂರು, ಚಿಕ್ಕಬಳ್ಳಾಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.