ADVERTISEMENT

ಉತ್ತರ ಪತ್ರಿಕೆ ನಕಲು ಪ್ರತಿ ಶುಲ್ಕ ಇಳಿಕೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆಯಲು ನಿಗದಿಪಡಿಸಿದ್ದ  ಶುಲ್ಕವನ್ನು ಕಡಿತ­ಗೊಳಿಸುವ ಮೂಲಕ ವಿದ್ಯಾರ್ಥಿಗಳ ಮೇಲಿನ ಮರು ಮೌಲ್ಯಮಾಪನ ಅರ್ಜಿ ಶುಲ್ಕದ ಹೊರೆಯನ್ನು ತಗ್ಗಿಸಿದೆ.

ವಿ.ಟಿ.ಯು.ನ ಪರೀಕ್ಷಾ ಸುಧಾರ ಣೆಯಿಂದಾಗಿ ಲಿಖಿತ ಪರೀಕ್ಷೆಗಳ ಉತ್ತರ ಪತ್ರಿಕೆಯ ನಕಲು ಪ್ರತಿಯ ಸಾಫ್ಟ್‌ ಕಾಪಿ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅಥವಾ ಉತ್ತರ ಪ್ರತಿಯ ಸಾಫ್ಟ್‌ ಕಾಪಿಗೆ ಮಾತ್ರ ಅಥವಾ ಬರೀ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲ ವಿಷಯಗಳ ಮೌಲ್ಯಮಾ ಪನಕ್ಕೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಕೊನೆಯ ದಿನ ದಿಂದ ಒಂದು ವಾರದೊಳಗೆ ಸಾಫ್ಟ್‌ ಕಾಪಿಯನ್ನು ವಿದ್ಯಾರ್ಥಿಗಳಿಗೆ ಇಮೇಲ್‌ ಮೂಲಕ ಪೂರೈಸಲಾಗುತ್ತದೆ.

ಇದರಿಂ ದಾಗಿ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ಯನ್ನು ಪರಿಶೀಲಿಸಿ, ಯಾವ ಪ್ರಶ್ನೆಗಳ ಮೌಲ್ಯ ಮಾಪನ ಸರಿಯಾಗಿ ನಡೆದಿಲ್ಲ ಎಂಬುದನ್ನು ತಿಳಿದು ಕೊಂಡು, ಅಗತ್ಯ ಎನಿಸಿದರೆ ಮಾತ್ರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅನುಕೂಲ ವಾಗಲಿದೆ. ಬಳಿಕ ಮೌಲ್ಯ ಮಾಪನ ನಡೆಸದೇ ಇರುವ ಪ್ರಶ್ನೆಗಳ ಮರು ಮೌಲ್ಯಮಾಪನಕ್ಕೆ ಕುಲ ಸಚಿವರಿಗೆ (ಮೌಲ್ಯ ಮಾಪನ) ಅರ್ಜಿ ಸಲ್ಲಿಸಿದರೆ, ಈ ಪ್ರಕ್ರಿಯೆಗೆ ಶುಲ್ಕ ವಿಧಿಸುವುದಿಲ್ಲ ಎಂದು ವಿಟಿಯು ಕುಲಸಚಿವ ಕೆ.ಇ. ಪ್ರಕಾಶ ಪ್ರಕಟಣೆ ಯಲ್ಲಿ ತಿಳಿದ್ದಾರೆ.

ಇದಕ್ಕೂ ಮೊದಲು ಒಂದು ವಿಷಯದ ಮರು ಮೌಲ್ಯಮಾಪನಕ್ಕೆ ವಿದ್ಯಾರ್ಥಿಯು ₨ 900  ಪಾವತಿಸಬೇಕಾಗುತ್ತಿತ್ತು. ಆಗಿನ ಪದ್ಧತಿಯ ಪ್ರಕಾರ ಉತ್ತರ ಪತ್ರಿಕೆಯ ನಕಲು ಪ್ರತಿಯನ್ನು ಪಡೆದುಕೊ ಳ್ಳುವುದು ಕಡ್ಡಾಯ ವಾಗಿತ್ತು. ಇದಕ್ಕೆ ₨ 500 ಶುಲ್ಕ ವಿಧಿಸಲಾಗುತ್ತಿತ್ತು.
ಆದರೆ, ಈಗ ವಿದ್ಯಾರ್ಥಿ ಒಂದು ವಿಷಯದಮರು ಮೌಲ್ಯಮಾಪನ ಮಾಡಲು ಇಚ್ಛಿಸಿದರೆ, ₨ 900 ಬದಲು ಕೇವಲ ₨ 400  ಪಾವತಿಸಿದರೆ ಸಾಕು.

ಉತ್ತರ ಪತ್ರಿಕೆಯ ನಕಲು ಪ್ರತಿಯಸಾಫ್ಟ್‌ ಕಾಪಿಯನ್ನು ಪಡೆಯಲು ಇಚ್ಛಿಸಿದರೆ ಹೆಚ್ಚುವರಿಯಾಗಿ ₨ 300  ಪಾವತಿ ಸಬೇಕು. ಈ ಪದ್ಧತಿಯಿಂದಾಗಿ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಕಡಿಮೆಯಾಗುವುದರ ಜೊತೆಗೆ ವೇಗವಾಗಿ ಈ ಪ್ರಕ್ರಿಯೆ ಮುಗಿಯಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.