ADVERTISEMENT

ಉರ್ದು ಕವಿ ಹಬೀಬುಲ್ಲಾ ಖಾನ್ ನಿಧನ

​ಪ್ರಜಾವಾಣಿ ವಾರ್ತೆ
Published 13 ಮೇ 2012, 19:30 IST
Last Updated 13 ಮೇ 2012, 19:30 IST
ಉರ್ದು ಕವಿ ಹಬೀಬುಲ್ಲಾ ಖಾನ್ ನಿಧನ
ಉರ್ದು ಕವಿ ಹಬೀಬುಲ್ಲಾ ಖಾನ್ ನಿಧನ   

ದಾವಣಗೆರೆ:  ಹಿರಿಯ ಉರ್ದು ಕವಿ, ಹಿಂದಿ ಚಲನಚಿತ್ರಗಳ ಗೀತೆ ರಚನೆಕಾರ ಚನ್ನಗಿರಿ ತಾಲ್ಲೂಕು ನಲ್ಲೂರಿನ ಹಬೀಬುಲ್ಲಾ ಖಾನ್ ಸೈಫ್ (79) ಭಾನುವಾರ ನಿಧನರಾದರು.

ಅವರು ಕಾಗಜ್‌ಕಾ ಫೂಲ್, ಮಿನಿಸ್ಟರ್ ಸೇರಿದಂತೆ ಹಲವು ಹಿಂದಿ ಸಿನಿಮಾಗಳಿಗೆ ಗೀತೆ ರಚನೆ ಮಾಡ್ದ್ದಿದರು. ತೀನ್‌ಪಥ್, ರೆಡ್ ಸಿಗ್ನಲ್ ಚಿತ್ರಗಳಲ್ಲಿ ಅಭಿನಯಿಸಿದ್ದರು. ಉತ್ತಮ ಕವಿತೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಸೈಫ್ ಅವರು ದುಬೈ, ಪಾಕಿಸ್ತಾನದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಬದುಕಿನ ಹೆಚ್ಚಿನ ಸಮಯ ಮುಂಬೈನಲ್ಲಿ ಕಳೆದಿದ್ದ ಅವರು ಕೆಲ ವರ್ಷಗಳಿಂದ ನಲ್ಲೂರಿನಲ್ಲಿ ನೆಲೆಸಿದ್ದರು.
ಅವರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

ಅವರ ಅಂತ್ಯಸಂಸ್ಕಾರ ನಲ್ಲೂರಿನ ಖಬರ್‌ಸ್ಥಾನದಲ್ಲಿ ಸೋಮವಾರ ಮಧ್ಯಾಹ್ನ 12ಕ್ಕೆ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.