ADVERTISEMENT

ಎಚ್.ಕೆ.ಪಾಟೀಲ್ ಕ್ಷಮೆ ಕೇಳಲಿ- ಪೂಜಾರಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 19:59 IST
Last Updated 11 ಜುಲೈ 2013, 19:59 IST

ಮಂಗಳೂರು: `ಎಚ್.ಕೆ. ಪಾಟೀಲ್ ತಮ್ಮ ಹೇಳಿಕೆಗೆ ಎರಡು ದಿನಗಳ ಒಳಗಾಗಿ ಜನತೆಯಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಕಿಡಿಕಾರಿದರು.

ತಪ್ಪಾಗಿ ಅರ್ಥೈಸಲಾಗಿದೆ'
`ಅನ್ನ ಭಾಗ್ಯ ಯೋಜನೆ ವಿರುದ್ಧ ನಾನು ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಸಚಿವ ಎಚ್.ಕೆ.ಪಾಟೀಲ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, `ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಅನ್ನಭಾಗ್ಯ ಯೋಜನೆಯ ಕುರಿತು  `ಸರ್ಕಾರಿ ಯೋಜನೆಗಳ ಮೂಲಕ ಗ್ರಾಮಿಣ ಜನರನ್ನು ಪರಾವಲಂಬಿಗಳನ್ನಾಗಿ ಮಾಡುವುದು ಸರಿಯಲ್ಲ' ಎಂದು ಹೇಳಿರುವುದಕ್ಕೆ ಪೂಜಾರಿ ಹೀಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

`ಅನ್ನಭಾಗ್ಯ' ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಣೆಯಾಗಿ ಕೇಂದ್ರ ಸರ್ಕಾರದ ಒಪ್ಪಿಗೆಯನ್ನೂ ಪಡೆದಿದೆ. ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಸಚಿವರಾದ ಪಾಟೀಲ್ ಅವರ ಕರ್ತವ್ಯ. ಅದು ಬಿಟ್ಟು ಸರ್ಕಾರದ ಯೋಜನೆಯ ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದಾರೆ. ಈ ಮೂಲಕ ಪಕ್ಷದ ಶಿಸ್ತನ್ನು ಮುರಿದಿದ್ದಾರೆ. ಇದು ಪ್ರತಿಪಕ್ಷಗಳಿಗೆ ವಿರೋಧಿಸಲು ಅಸ್ತ್ರವಾಗುತ್ತದೆ' ಎಂದರು.

ಗ್ರಾಮಸಭೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ಸಮರ್ಥಿಸಿದ ಅವರು, `ಗ್ರಾಮ ಸಭೆಯಿಂದ ಸರ್ಕಾರಕ್ಕೆ ಬೇರು ಮಟ್ಟದ ಸಮಸ್ಯೆ, ಅಗತ್ಯಗಳ ಅರಿವಾಗುತ್ತದೆ. ಸಂವಿಧಾನವೇ ಗ್ರಾಮ ಸಭೆಯ ಅಗತ್ಯದ ಕುರಿತು ವ್ಯಾಖ್ಯಾನ ನೀಡಿದ್ದು ಗ್ರಾಮ ಸಭೆ ನಡೆಸದ ಅಧ್ಯಕ್ಷರನ್ನು ಅನರ್ಹಗೊಳಿಸಿದರೆ ತಪ್ಪೇನು?' ಎಂದು ಪ್ರಶ್ನಿಸಿದರು.

ಯೋಜನೆ ಯಶಸ್ಸಿಗೆ:
`ಅನ್ನಭಾಗ್ಯ' ಯೋಜನೆಯ ಅಕ್ಕಿಯನ್ನು ಎಲ್ಲಾ ಕಡೆ ಒಂದೇ ದಿನ ನೀಡುವುದು. ಆ ದಿನ ಕಡ್ಡಾಯವಾಗಿ ಒಬ್ಬ ಅಧಿಕಾರಿ ಅಕ್ಕಿ ವಿತರಿಸುವಲ್ಲಿ ಹಾಜರಿರಬೇಕು. ಸಚಿವ, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಅಕ್ಕಿ ವಿತರಣೆ ಪರಿಣಾಮಕಾರಿಯಾಗಿ ಆಗುವಂತೆ ವಿತರಣೆ ಆಗುವಲ್ಲಿಗೆ ಹೋಗಿ ಪರೀಕ್ಷಿಸಬೇಕು. ಅಕ್ಕಿಯನ್ನು ತೂಗಿ ಕೊಡುವುದರ ಬದಲಾಗಿ 30 ಕೆ.ಜಿ.ಯ ಒಂದೊಂದು ಚೀಲ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT