ADVERTISEMENT

ಒಬ್ಬ ಪರೀಕ್ಷಾರ್ಥಿ: 14 ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2014, 19:30 IST
Last Updated 25 ಮಾರ್ಚ್ 2014, 19:30 IST
ಆಳಂದ ಪಟ್ಟಣದ ಡಾ.ಆರ್ಎಂಎಲ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ವಿದ್ಯಾರ್ಥಿನಿಯೊಬ್ಬಳು ಉರ್ದು ಪತ್ರಿಕೆಯ ಪರೀಕ್ಷೆ ಬರೆದಳು
ಆಳಂದ ಪಟ್ಟಣದ ಡಾ.ಆರ್ಎಂಎಲ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ವಿದ್ಯಾರ್ಥಿನಿಯೊಬ್ಬಳು ಉರ್ದು ಪತ್ರಿಕೆಯ ಪರೀಕ್ಷೆ ಬರೆದಳು   

ಆಳಂದ (ಗುಲ್ಬರ್ಗ ಜಿಲ್ಲೆ): ಪಟ್ಟಣದ ಡಾ.ರಾಮ ಮನೋಹರ ಲೋಹಿಯಾ ಪಿಯು ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದ ಉರ್ದು ಭಾಷೆ  ಪರೀಕ್ಷೆಗೆ ವಿದ್ಯಾರ್ಥಿನಿ ಅಫಸಾನಾ ತರನೂರ ಒಬ್ಬರೇ ಹಾಜರಾಗಿದ್ದು ವಿಶೇಷವಾಗಿತ್ತು.

ಈ ಪರೀಕ್ಷೆ ಕೇಂದ್ರದಲ್ಲಿ ನಿಂಬರ್ಗಾ, ಲಾಡಚಿಂಚೋಳಿ, ಡಾ.ಆರ್.ಎಂ.ಎಲ್ ಮತ್ತು ಕಡಗಂಚಿ ಕಾಲೇಜಿನ  ಒಟ್ಟು 661 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಒಬ್ಬ ವಿದ್ಯಾರ್ಥಿನಿಗಾಗಿ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ, ಸಹ ಅಧೀಕ್ಷಕ, ಇಬ್ಬರು ಜಾಗೃತ ದಳ ಸಿಬ್ಬಂದಿ, ಕೋಣೆ ಮೇಲ್ವಿಚಾರಕ, ಕಚೇರಿ ಅಧೀಕ್ಷಕ, ಉಪಅಧೀಕ್ಷಕ, ಪ್ರಶ್ನೆ ಪತ್ರಿಕೆ ಪರಿಪಾಲಕ, ಉತ್ತರ ಪತ್ರಿಕೆ ಪರಿಪಾಲಕ, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ, ಪೊಲೀಸ್ ಪೇದೆ ಇಬ್ಬರು ಹಾಗೂ ಕಚೇರಿ ಸಹಾಯಕ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.