ADVERTISEMENT

ಕಂದಕದಲ್ಲಿ ಸಿಲುಕಿದ್ದ ಮರಿಯಾನೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 20:19 IST
Last Updated 1 ಜುಲೈ 2017, 20:19 IST
ಗೋಣಿಕೊಪ್ಪಲು ಬಳಿಯ ತಾರಿಕಟ್ಟೆ ಅರಣ್ಯದಂಚಿನಲ್ಲಿ ಕಂದಕಕ್ಕೆ ಬಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮೇಲೆ ಎತ್ತಿ ಮರಳಿ ಕಾಡಿಗೆ ಬಿಟ್ಟರು
ಗೋಣಿಕೊಪ್ಪಲು ಬಳಿಯ ತಾರಿಕಟ್ಟೆ ಅರಣ್ಯದಂಚಿನಲ್ಲಿ ಕಂದಕಕ್ಕೆ ಬಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮೇಲೆ ಎತ್ತಿ ಮರಳಿ ಕಾಡಿಗೆ ಬಿಟ್ಟರು   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಭದ್ರಗೋಳ ಬಳಿಯ ತಾರಿಕಟ್ಟೆಯಲ್ಲಿ ಅರಣ್ಯದಂಚಿನ ಕಂದಕಕ್ಕೆ ಕಾಲು ಜಾರಿ ಬಿದ್ದಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಮೇಲೆತ್ತಿ ರಕ್ಷಿಸಿ ನಂತರ ಕಾಡಿಗೆ ಬಿಟ್ಟರು.

ಒಂದೂವರೆ ವರ್ಷ ಪ್ರಾಯದ ಕಾಡಾನೆ ಮರಿ ಕಂದಕದಿಂದ ಮೇಲೆ ಬರಲಾಗದೆ ಘೀಳಿಡುತ್ತಿತ್ತು. ಮರಿಯ ರಕ್ಷಣೆ ಮಾಡಲಾಗದೆ ತಾಯಿ ಆನೆ ಕೂಡ ಕಂದಕದ ದಡದಲ್ಲಿ ನಿಂತು ಘೀಳಿಡುತ್ತಾ ಸುತ್ತ ಗಸ್ತು ತಿರುಗುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿ ಆನೆಯನ್ನು ಬೆದರಿಸಿ ದೂರ ಓಡಿಸಿದರು. ಬಳಿಕ ಕಂದಕದ ದಡದ ಮಣ್ಣು ತೆಗೆಸಿ ಮರಿಯಾನೆ ಸೊಂಟಕ್ಕೆ ಹಗ್ಗ ಹಾಕಿ ಮೇಲೆತ್ತಿದರು. ಬಳಿಕ ಮರಿಯನ್ನು ಕಾಡಿಗೆ ಬಿಡಲಾಯಿತು. ಅನತಿ ದೂರದಲ್ಲಿ ನಿಂತಿದ್ದ ತಾಯಿ ಆನೆಯೂ ಮರಿಯನ್ನು ಕೂಡಿಕೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.