ADVERTISEMENT

ಕಣ್ಮನ ತುಂಬಿದ ಶಾರದಾಂಬೆ ಮಹಾ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಶೃಂಗೇರಿ: ಇಲ್ಲಿನ ಶಾರದಾ ಪೀಠದಲ್ಲಿ 10 ದಿನಗಳಿಂದ ನಡೆಯುತ್ತಿರುವ ಶಾರದಾ ಶರನ್ನವರಾತ್ರಿ ಅಂಗವಾಗಿ ಏಕಾದಶಿ ಶುಕ್ರವಾರ ಶಾರದಾಂಬಾ ಮಹಾ ರಥೋತ್ಸವ ಹಾಗೂ ಭಾರತೀತೀರ್ಥ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ವೈಭವಯುತವಾಗಿ ನಡೆಯಿತು. ದೂರದ ಊರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮಹಾ ರಥೋತ್ಸವ ವೀಕ್ಷಿಸಿ ಕಣ್ಮನ ತುಂಬಿಕೊಂಡರು.

ಜಾನಪದ ತಂಡಗಳ ಕುಣಿತ ರಥೋತ್ಸವದ ಸಂಭ್ರಮ ಹೆಚ್ಚಿಸಿತು. ಸ್ಥಳೀಯ ಕಾಂಚೀನಗರದ ಓಂ ಫ್ರೆಂಡ್ಸ್ ಗ್ರೂಪ್ ನಾಸಿಕ್ ಡ್ರಮ್ ವಾದನ, ಭಕ್ತಂಪುರ ಕೆರೆ ಚೌಡೇಶ್ವರ ದೇವಸ್ಥಾನ ಸಮಿತಿ ಪ್ರದರ್ಶಿಸಿದ ಶಿವಾಲಯ ದೃಶ್ಯ, ಕೆಸರುಕೊಡಿಗೆ ಮರಾಠಿ ಜನಾಂಗದವರ ಸುಗ್ಗಿ ಕುಣಿತ, ಬೇಗಾರು, ದರೆಕೊಪ್ಪ, ನೆಮ್ಮಾರಿನ ಯಕ್ಷಗಾನ ವೇಷಧಾರಿಗಳು, ಶಾರದಾ ನವರಸ ಕಲಾಬಳಗದ ಅಡಿಕೆ ಕೊನೆ ತೆಗೆಯುವ ಸ್ತಬ್ಧಚಿತ್ರ, ಭಜನಾ ತಂಡ ಗಮನ ಸೆಳೆದವು. ಶುಂಠಿಹಕ್ಲು ಧರ್ಮಸ್ಥಳ ಸ್ವಸಹಾಯ ಸಂಘ, ಗಂಡಘಟ್ಟ, ವೈಕುಂಠಪುರ ಗ್ರಾಮಸ್ಥರು, ಅಡ್ಡಗದ್ದೆ ಗ್ರಾಮ ಅರಣ್ಯ ಸಮಿತಿ, ಕುಂಚೇಬೈಲು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಬೆಳಚಪ್ಪ ನೃತ್ಯ, ವಿಶ್ವಕರ್ಮ ಸೇವಾ ಸಮಿತಿ ಸ್ತಬ್ಧಚಿತ್ರಗಳೂ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.