ADVERTISEMENT

ಕನ್ನಡದಲ್ಲೇ ಸೇವೆ ಒದಗಿಸಿ: ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:03 IST
Last Updated 15 ಮಾರ್ಚ್ 2018, 10:03 IST

ಬೆಂಗಳೂರು: ಭಾರತೀಯ ಗ್ರಾಹಕರಿಗೆ ತಮ್ಮದೇ ಭಾಷೆಯಲ್ಲಿ ಗ್ರಾಹಕ ಸೇವೆಗಳು ಸಿಗುವಂತೆ ಮಾಡಬೇಕೆಂಬ ಉದ್ದೇಶದಿಂದ ಕನ್ನಡ ಗ್ರಾಹಕರ ಕೂಟ ಹಮ್ಮಿಕೊಂಡಿರುವ #ServeInMyLanguage ಟ್ವಿಟರ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ವಿಶ್ವ ಗ್ರಾಹಕರ ಹಕ್ಕುಗಳ ದಿನವಾದ ಇಂದು (ಮಾರ್ಚ್ 15) ಬೆಳಿಗ್ಗೆ 10 ಗಂಟೆಯಿಂದ ಅಭಿಯಾನ ಆರಂಭವಾಗಿದೆ. #WorldConsumerRightsDay #ServeInMyLanguage ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಆರಂಭಗೊಂಡಿರುವ ಅಭಿಯಾನ ಬೆಂಬಲಿಸಿ ನೂರಾರು ಜನ ಟ್ವೀಟ್ ಮಾಡಿದ್ದಾರೆ.

ಕನ್ನಡಿಗರಿಗೆ ಕನ್ನಡದಲ್ಲೇ ಗ್ರಾಹಕ ಸೇವೆಗಳು ದೊರೆಯುವಂತಾಗಬೇಕು ಎಂದು ನೂರಾರು ಮಂದಿ ಟ್ವೀಟ್ ಮಾಡಿದ್ದರೆ, ಫೇಸ್‌ಬುಕ್‌ನಲ್ಲೂ ಅನೇಕ ಸಂದೇಶಗಳು ಹರಿದಾಡುತ್ತಿವೆ.

ADVERTISEMENT

‘ಕನ್ನಡಿಗರಿಗೆ ಎಲ್ಲ ಸೇವೆ, ಸವಲತ್ತುಗಳೂ ಕನ್ನಡದಲ್ಲೇ ದೊರೆಯುವಂತಾಗಬೇಕು’ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.