ADVERTISEMENT

ಕಲಬುರ್ಗಿ ಜೈಲಿನಲ್ಲಿ ಗಾಂಜಾ, ಮಾರಕಾಸ್ತ್ರ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 7:33 IST
Last Updated 26 ಏಪ್ರಿಲ್ 2018, 7:33 IST
ಜೈಲಿನಲ್ಲಿ ಪತ್ತೆಯಾಗಿರುವ ವಸ್ತುಗಳು
ಜೈಲಿನಲ್ಲಿ ಪತ್ತೆಯಾಗಿರುವ ವಸ್ತುಗಳು   

ಕಲಬುರ್ಗಿ: ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಎಎಸ್‌ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ದಾಳಿ ಮಾಡಿದೆ.

ದಾಳಿ ವೇಳೆ 40 ಚಾಕು, 13 ಟೇಬಲ್ ಫ್ಯಾನ್‌, ಎರಡು ಸಿಮ್‌, 12 ಲೈಟರ್, ನೇಲ್ ಕಟರ್, ಅಡಕೆ ಚೀಟಿ, ಬೀಡಿ, ಸಿಗರೇಟು, ಗುಟ್ಕಾ, ಅಡುಗೆಗೆ ಬಳಸುವ ಮಸಾಲೆ ಪದಾರ್ಥ, ಮಿಕ್ಸರ್, 5 ಕೆ.ಜಿ. ಶೇಂಗಾ ಎಣ್ಣೆ ಹಾಗೂ ₹4,000 ನಗದು ಪತ್ತೆಯಾಗಿದೆ.

ADVERTISEMENT

ಜೈಲಿನಲ್ಲಿ ಪತ್ತೆಯಾಗಿರುವ ವಸ್ತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.