ADVERTISEMENT

ಕಾಂಗ್ರೆಸ್ ನೇತಾರ ಕೆ.ಎಚ್. ರಂಗನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 6:30 IST
Last Updated 18 ಅಕ್ಟೋಬರ್ 2011, 6:30 IST
ಕಾಂಗ್ರೆಸ್ ನೇತಾರ ಕೆ.ಎಚ್. ರಂಗನಾಥ್ ನಿಧನ
ಕಾಂಗ್ರೆಸ್ ನೇತಾರ ಕೆ.ಎಚ್. ರಂಗನಾಥ್ ನಿಧನ   

ಬೆಂಗಳೂರು, (ಪಿಟಿಐ): ಹಿರಿಯ ರಾಜಕೀಯ ಮುತ್ಸದ್ದಿ ಹಾಗೂ ಕಾಂಗ್ರೆಸ್ ಪಕ್ಷದ  ಹಿರಿಯ ನೇತಾರ ಕೆ.ಎಚ್. ರಂಗನಾಥ್ (86) ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. 

ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಕೆ.ಎಚ್. ರಂಗನಾಥ್ ಅವರು, ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ್ದ ಅವರು, 1984-89 ರ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ದಿ. ದೇವರಾಜ ಅರಸ್ ಹಾಗೂ ಬಂಗಾರಪ್ಪ ಮತ್ತು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಅವರು ಸಚಿವರಾಗಿದ್ದರು. ಕೆಲವು ಕಾಲ ಅವರು ವಿಧಾನಸಭೆಯ ಸಭಾಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಮೃತದೇಹವನ್ನು ಅವರ ಹುಟ್ಟೂರು ಹಿರಿಯೂರಿಗೆ ಸಾಗಿಸಲಾಗುತ್ತಿದ್ದು, ಬುಧವಾರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.