ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಮುಖಾ ಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಭವಿಸಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಕಿರಣ್ ವೀರೇಂದ್ರ ನಾವಿ (20), ಮಂಜುನಾಥ ಹಡಪದ(19), ಹಳೇ ಮುದ್ದಿನಕಟ್ಟೆ ಗ್ರಾಮದ ಶಿವಾನಂದ ಹಡಪದ (23) ಹಾಗೂ ಕಾಖಂಡಕಿ ಗ್ರಾಮದ ಬಸವರಾಜ ನಾವಿ(25) ಸಾವಿಗೀಡಾಗಿದ್ದಾರೆ.
ಕಾರಿನ ಚಾಲಕ ಕಿರಣ್ ನಾವಿ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದು, ರಜೆಯ ಮೇಲೆ ತಮ್ಮೂರಾದ ಸಿಂದಗಿಗೆ ನಾಲ್ಕು ದಿನಗಳ ಹಿಂದೆ ಬಂದಿದ್ದರು. ಮೂವರು ಸ್ನೇಹಿತರೊಂದಿಗೆ ಮೈಸೂ ರಿಗೆ ಪ್ರವಾಸ ಹೋಗಿದ್ದ ಅವರು ಸಿಂದ ಗಿಗೆ ವಾಪಸ್ ಬರುತ್ತಿದ್ದರು. ಶಿವಪುರ ಬಳಿ ಹೊಸಪೇಟೆ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಕಾರಿನ ಡಿಕ್ಕಿ ಸಂಭವಿಸಿದೆ.
ಕಾರಿನಲ್ಲಿ ಸಿಲುಕಿಕೊಂಡಿದ್ದ ಶವ ಗಳನ್ನು ಜೆಸಿಬಿ ಸಹಾಯದಿಂದ ಹೊರತೆಗೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.