ADVERTISEMENT

ಕುಳಿತಲ್ಲೇ ಬಿಸಿಯೂಟ ಬಡಿಸುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಶಾಲೆಯ ಕಾರಿಡಾರ್‌ ಅಥವಾ ಕೋಣೆಯಲ್ಲಿ ಮಕ್ಕಳಿಗೆ ಕುಳಿತಲ್ಲೇ ಕಡ್ಡಾಯವಾಗಿ ಮಧ್ಯಾಹ್ನದ ಬಿಸಿಯೂಟ ಬಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮಕ್ಕಳು ಪಾತ್ರೆ ಮುಂದೆ  ಸಾಲಿನಲ್ಲಿ ನಿಂತು ಊಟವನ್ನು ತಟ್ಟೆಗೆ ಹಾಕಿಸಿ ಕೊಳ್ಳುವಂತಿಲ್ಲ. ಕುಳಿತ ಸ್ಥಳದಲ್ಲೇ ಮಕ್ಕಳು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಕರಿಗೆ ಸೂಚಿಸ ಲಾಗಿದೆ. ಬಿಸಿಯೂಟದ ಸಾಂಬಾರು ಪಾತ್ರೆಗೆ ಬಿದ್ದು ಮಕ್ಕಳು ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಆಯುಕ್ತ ಮೊಹಮ್ಮದ್‌ ಮೊಹಿಸಿನ್‌  ಸುತ್ತೋಲೆ ಹೊರಡಿಸಿದ್ದು, ಶಾಲೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದ್ದಾರೆ.

ಸುತ್ತೋಲೆಯಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸದೆ ಇದ್ದರೆ, ಬಿಸಿಯೂಟ ಯೋಜನೆಯ ನಿರ್ವಹಣೆ ಯಲ್ಲಿ ಏನಾದರೂ ಲೋಪಗಳಾದರೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡು ವುದಾಗಿ ಎಚ್ಚರಿಕೆ ನೀಡಲಾಗಿದೆ.

ಪರಿಷ್ಕೃತ ಸುತ್ತೋಲೆ ಪ್ರಕಾರ ಬಿಸಿ ಯೂಟದ ಹೊಣೆಯನ್ನು ಶಿಕ್ಷಕರೇ ವಹಿ ಸಿಕೊಳ್ಳಬೇಕು. ಇದರಲ್ಲಿ ಏನಾ ದರೂ ವ್ಯತ್ಯಾಸಗಳು ಆದರೆ ಶಿಕ್ಷಕರನ್ನೇ ಜವಾ ಬ್ದಾರರನ್ನಾಗಿ ಮಾಡಲಾಗುತ್ತದೆ.

ಶಿಕ್ಷಕ ರು ತಮಗೆ ವಹಿಸಿರುವ ಜವಾಬ್ದಾರಿ ಸರಿಯಾಗಿ ನಿರ್ವಹಿ ಸದೆ ಕರ್ತವ್ಯ ಲೋಪ ಎಸಗಿದರೆ ಶಿಸ್ತು ಕ್ರಮ ಕೈಗೊಳ್ಳ ಲಾಗುತ್ತದೆ. ಹೀಗಾಗಿ ಶಿಕ್ಷಕರು ಪಾಠದ ಜೊತೆಗೆ ಮಕ್ಕಳ ಊಟ, ರಕ್ಷಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಾಗುತ್ತದೆ.

ಯೋಜನೆ ಜಾರಿ ಯಾದ ನಂತರ ಯಶಸ್ವಿ ನಿರ್ವಹಣೆ ಮಕ್ಕಳ ಸುರ ಕ್ಷತೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದರೂ ಅದರ ಪಾಲನೆ ಆಗುತ್ತಿಲ್ಲ. ಈಚೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿರುವುದೇ ಇದಕ್ಕೆ ನಿದರ್ಶನ ಎಂದು ಭಾವಿಸಿರುವ ಸರ್ಕಾರ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸರ್ಕಾರಿ ಸುತ್ತೋಲೆಯ ಮುಖ್ಯಾಂಶಗಳು
* ಅಡುಗೆ ಕೋಣೆಯ ಒಳಗೆ ಮಕ್ಕಳಿಗೆ ಪ್ರವೇಶ ನಿಷೇಧ
* ಅಡುಗೆಯವರು ಸಣ್ಣ ಸಣ್ಣ ಬಕೆಟ್‌ಗಳಲ್ಲೇ ಅನ್ನ,  ಸಾಂಬಾರು  ತುಂಬಿಕೊಂಡು ಮಕ್ಕಳಿಗೆ ಊಟ  ಬಡಿಸಬೇಕು. ದೊಡ್ಡ ಪಾತ್ರೆಗಳನ್ನು ಬಳಸುವಂತಿಲ್ಲ.
* ಅಡುಗೆ ತಯಾರಾದ ನಂತರ ಬಿಸಿಯಾದ ಅನ್ನ, ಸಾಂಬಾರು ಪಾತ್ರೆಗಳನ್ನು ಅಡುಗೆ ಕೋಣೆಯಿಂದ ಹೊರಗೆ ತರುವಂತಿಲ್ಲ. 
* ಊಟದ ವೇಳೆ ಎಲ್ಲ ಶಿಕ್ಷಕರು ಹಾಗೂ ಅಡುಗೆಯವರು ಹಾಜರಿದ್ದು, ಊಟದ ಉಸ್ತುವಾರಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
* ಕುಡಿಯುವ ನೀರು, ಆಹಾರ ಪದಾರ್ಥಗಳ ಸ್ವಚ್ಛತೆ, ಗುಣಮಟ್ಟ ಪರಿಶೀಲನೆ, ಅಡುಗೆ ಮನೆ ಸ್ವಚ್ಚತೆ ಬಗ್ಗೆ ನೀಡಿರುವ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.
* ಮಕ್ಕಳು ಊಟ ಮಾಡಿ ತರಗತಿಯೊಳಗೆ ಹೋಗುವವರೆಗೂ ತರಗತಿ ಶಿಕ್ಷಕರು ನಿಗಾ ವಹಿಸಬೇಕು. ತರಗತಿ ಶಿಕ್ಷಕರು ರಜಾ ಪಡೆದುಕೊಂಡಿದ್ದರೆ ಮತ್ತೊಬ್ಬ ಶಿಕ್ಷಕರಿಗೆ ಆ ಜವಾಬ್ದಾರಿಯನ್ನು ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.