ಬೆಂಗಳೂರು: ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು 12 ಸಂಪುಟಗಳಲ್ಲಿ ಮುದ್ರಿಸಿ, ಕಿಟ್ ರೂಪದಲ್ಲಿ ಮಾರಾಟ ಮಾಡುವ ಯೋಜನೆಯನ್ನು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಮ್ಮಿಕೊಂಡಿದೆ.
ಲಭ್ಯವಿರುವ ಕುವೆಂಪು ಅವರ ಸಾಹಿತ್ಯದ ಎಲ್ಲ ಕೃತಿಗಳ ಬಿಡಿ ಪ್ರತಿಗಳನ್ನು ಖರೀದಿಸಿದರೆ ಒಟ್ಟು 5,200 ರೂಪಾಯಿ ಆಗುತ್ತದೆ. ಆದರೆ ಪ್ರತಿಷ್ಠಾನ ಹಮ್ಮಿಕೊಂಡಿರುವ ಹೊಸ ಯೋಜನೆಯಲ್ಲಿ ಕುವೆಂಪು ಅವರ ಸಮಗ್ರ ಸಾಹಿತ್ಯದ ಕಿಟ್ ರೂ. 3,000ಕ್ಕೆ ದೊರೆಯಲಿದೆ.
3,000 ರೂಪಾಯಿ ಮೊತ್ತದ ಡಿ.ಡಿಯನ್ನು ಅಂಚೆ ಅಥವಾ ಪ್ರೊಫೆಷನಲ್ ಕೊರಿಯರ್ ಮೂಲಕ ಪ್ರತಿಷ್ಠಾನಕ್ಕೆ ಕಳುಹಿಸಬಹುದು.
ಜತೆಗೆ ತಮ್ಮ ಅಂಚೆ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು. ಡಿ.ಡಿ ಕಳುಹಿಸುವವರಿಗೆ ಆದ್ಯತೆಯ ಮೇರೆಗೆ ಮೂರು ತಿಂಗಳ ಒಳಗಾಗಿ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಪ್ರತಿಷ್ಠಾನದ ದೂ. ಸಂಖ್ಯೆ 08182-274120 ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆನರಾ ಬ್ಯಾಂಕ್‌ನ ಬಸವಾನಿ ಶಾಖೆಗೆ (0577) ಪಾವತಿ ಆಗುವಂತೆ `ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿ~ ಎಂಬ ಹೆಸರಿನಲ್ಲಿ ಡಿ.ಡಿ ಖರೀದಿಸಬೇಕು.
ಡಿ.ಡಿ. ಕಳುಹಿಸಬೇಕಾದ ಅಂಚೆ ವಿಳಾಸ: ಕಡಿದಾಳ್ ಪ್ರಕಾಶ್, ಸಮ ಕಾರ್ಯದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ), ಕುಪ್ಪಳಿ, ದೇವಂಗಿ ಅಂಚೆ-577415, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.