ADVERTISEMENT

ಕೆಪಿಜೆಪಿಯಿಂದ ಉಪೇಂದ್ರ ಹೊರಗೆ: ಹೊಸ ಪಕ್ಷ ‘ಪ್ರಜಾಕೀಯ’ ಸ್ಥಾಪನೆ ಖಚಿತ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 9:13 IST
Last Updated 6 ಮಾರ್ಚ್ 2018, 9:13 IST
ಕೆಪಿಜೆಪಿಯಿಂದ ಉಪೇಂದ್ರ ಹೊರಗೆ: ಹೊಸ ಪಕ್ಷ ‘ಪ್ರಜಾಕೀಯ’ ಸ್ಥಾಪನೆ ಖಚಿತ
ಕೆಪಿಜೆಪಿಯಿಂದ ಉಪೇಂದ್ರ ಹೊರಗೆ: ಹೊಸ ಪಕ್ಷ ‘ಪ್ರಜಾಕೀಯ’ ಸ್ಥಾಪನೆ ಖಚಿತ   

ಬೆಂಗಳೂರು: ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಉಂಟಾದ ಭಿನ್ನಮತದ ಪರಿಣಾಮವಾಗಿ ಕರ್ನಾಟಕ ಪ್ರಜಾಕೀಯ ಜನತಾ ಪಕ್ಷದ (ಕೆಪಿಜೆಪಿ) ನೇತೃತ್ವದ ವಹಿಸಿರುವ ನಟ ಉಪೇಂದ್ರ ಪಕ್ಷದಿಂದ ಹೊರ ಬರುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕೆಪಿಜೆಪಿ ಸಂಸ್ಥಾಪಕ ಮಹೇಶ್‌ ಗೌಡ ಮತ್ತು ಉಪೇಂದ್ರ ಮಧ್ಯೆ ಭಿನ್ನಮತ ಸ್ಫೋಟಗೊಂಡಿತ್ತು. ಇಂದು ಉಪ್ಪೀಸ್‌ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಕೆಪಿಜೆಪಿಯಿಂದ ಹೊರ ಬರಲು ಉಪೇಂದ್ರ ನಿರ್ಧರಿಸಿದ್ದಾರೆ. ಉಪೇಂದ್ರ ಅವರ ಜೊತೆಗೆ ಪಕ್ಷದ ಕೆಲವು ಸದಸ್ಯರೂ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

‘ಪ್ರಜಾಕೀಯ’ ಹೊಸ ಪಕ್ಷ ಸ್ಥಾಪಿಸುವುದಾಗಿಯೂ ಹೇಳಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.