ADVERTISEMENT

ಕೌಶಿಕ್‌ ಮುಖರ್ಜಿ: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2013, 19:30 IST
Last Updated 29 ಅಕ್ಟೋಬರ್ 2013, 19:30 IST
ಕೌಶಿಕ್‌ ಮುಖರ್ಜಿ: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ
ಕೌಶಿಕ್‌ ಮುಖರ್ಜಿ: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ   

ಬೆಂಗಳೂರು: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಲಾಗಿದೆ. 

ಮೂಲತಃ ಪಶ್ಚಿಮ ಬಂಗಾಳಕ್ಕೆ ಸೇರಿದ ಕರ್ನಾಟಕ ಕೇಡರ್‌ನ ಐಎಎಸ್‌ ಅಧಿ ಕಾರಿಯಾಗಿರುವ ಮುಖರ್ಜಿ ಅವರ ಸೇವಾವಧಿ 2015ರ ಸೆಪ್ಟೆಂಬರ್‌ವರೆಗೆ ಇದೆ. ಹಾಲಿ ಮುಖ್ಯ ಕಾರ್ಯದರ್ಶಿ ಯಾಗಿರುವ ಎಸ್‌.ವಿ. ರಂಗನಾಥ್‌ ಇದೇ 31ಕ್ಕೆ ಸೇವಾ ನಿವೃತ್ತಿ ಹೊಂದ ಲಿದ್ದು, ಅದೇ ದಿನ ಮುಖರ್ಜಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೇವಾ ಹಿರಿತನದಲ್ಲಿ ರಂಗನಾಥ್‌ ನಂತರದ ಸ್ಥಾನದಲ್ಲಿರುವ ಡಾ.ಸುಧೀರ್‌ ಕೃಷ್ಣ ಕೇಂದ್ರ ಸೇವೆಯಲ್ಲಿದ್ದು, 2014ರ ಜೂನ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಕಡಿಮೆ  ಸೇವಾವಧಿ ಇರುವ ಕಾರಣ ಅವರು ರಾಜ್ಯಕ್ಕೆ ವಾಪಸ್‌ ಬರಲು ನಿರಾಕರಿಸಿದರು ಎನ್ನಲಾಗಿದೆ. ಹೀಗಾಗಿ ಸುಧೀರ್‌ಕೃಷ್ಣ ನಂತರದ ಸ್ಥಾನದಲ್ಲಿರುವ ಮುಖರ್ಜಿ ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡ ಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ಐಐಟಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ನಲ್ಲಿ ಎಂ.ಟೆಕ್ ಹಾಗೂ ಸ್ಟೇಟ್‌ ಯೂನಿವರ್ಸಿಟಿ ಆಫ್ ನೂ್ಯಯಾರ್ಕ್‌ನಲ್ಲಿ ಎಂ.ಎಸ್ ಮಾಡಿರುವ ಮುಖರ್ಜಿ 1978ರ ಜುಲೈ 12ರಂದು ಐಎಎಸ್‌ ಅಧಿಕಾರಿಯಾಗಿ ನೇಮಕಗೊಂಡವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.