ADVERTISEMENT

ಕ್ರಿಕೆಟ್ ಬೆಟ್ಟಿಂಗ್: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿ ಕ್ರಾಸ್ ಬಳಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಐವರನ್ನು ಬಂಧಿಸಿ, ಅವರಿಂದ 2.90 ಲಕ್ಷ ರೂ, ನಾಲ್ಕು ಮೊಬೈಲ್ ಹಾಗೂ ಒಂದು ಇಂಡಿಕಾ ಕಾರು ವಶಪಡಿಸಿಕೊಳ್ಳಲಾಗಿದೆ. ವಾಜೀದ್ ಸುತ್ತೂರ, ಸರ್ಫರಾಜ ಸೌದಾಗರ್, ಯಾಸೀನ್ ಪಟವೇಗಾರ, ಸದ್ರುದ್ದೀನ್ ಹುಸೇನ್‌ಶೇಖ್ ಹಾಗೂ ಅಶೋಕ ಸುತಾರ್ ಎಂಬ ಆರೋಪಿಗಳನ್ನು ಬುಧವಾರ ಬಂಧಿಸಲಾಗಿದೆ.

ಬೆಟ್ಟಿಂಗ್‌ನಲ್ಲಿ ಬಂದ ಹಣವನ್ನು ಕೊಲ್ಲಾಪುರ ಮೂಲಕ ಮುಂಬೈಗೆ ರವಾನಿಸುತ್ತಿದ್ದರು ಎಂದು ವಿಚಾರಣೆ ಕಾಲಕ್ಕೆ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಶಂಕೆ ಇದ್ದು, ಪತ್ತೆಗಾಗಿ 2 ವಿಶೇಷ ತಂಡಗಳನ್ನು ರಚಿಸಲಾಗಿದೆ, ಇನ್ನಿತರ ಆರೋಪಿಗಳನ್ನೂ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಎಸ್ಪಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.