ಮೈಸೂರು: ಹದಿನೈದು ದಿನಗಳ ನಿರಂತರ ನರ್ತನದ ಮೂಲಕ ತನ್ನದೇ ಗಿನ್ನಿಸ್ ದಾಖಲೆ ಮುರಿಯಲು ಮುಂದಾಗಿರುವ ಕನಕಪುರದ ಕಲಾವಿದ ಕ.ರಾ. ಚಂದ್ರಕುಮಾರ್ ನಾಯಕ್ `ಶಿವತಾಂಡವ ನೃತ್ಯ' ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಅಂಬಾವಿಲಾಸ ಅರಮನೆಯ ಉತ್ತರ ದ್ವಾರದಲ್ಲಿ ನಿರ್ಮಿಸಿರುವ ತೆರೆದ ವೇದಿಕೆಯ ಮೇಲೆ ಚಂದ್ರಕುಮಾರ್ ನೃತ್ಯ ಪ್ರದರ್ಶಿಸುತ್ತಿದ್ದಾರೆ. ಜುಲೈ 3ರಿಂದ 17ರ ವರೆಗೆ 360 ಗಂಟೆಗಳ ಕಾಲ ನಿರಂತರ ನೃತ್ಯ ಮಾಡಿ, ತನ್ನದೇ 168 ಗಂಟೆಯ ನರ್ತನದ ಗಿನ್ನಿಸ್ ದಾಖಲೆ ಮುರಿಯಲು ಪ್ರಯತ್ನಿಸುತ್ತಿದ್ದಾರೆ.
2005ರಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ 7 ದಿನಗಳ ಕಾಲ ನಿರಂತರ ನೃತ್ಯ ಪ್ರದರ್ಶಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.