ADVERTISEMENT

ಗುಲ್ಬರ್ಗದಲ್ಲೂ ನಡುಗಿದ ಭೂಮಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಗುಲ್ಬರ್ಗ: ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿರುವ ಆಳಂದ ತಾಲ್ಲೂಕಿನ ಉಮರ್ಗಾದಲ್ಲಿ ಸೋಮವಾರ ಲಘು ಭೂಕಂಪ ಸಂಭವಿಸಿದೆ.

ಬೆಳಿಗ್ಗೆ 6.22ರ ವೇಳೆಗೆ ರಿಕ್ಟರ್ ಮಾಪನದಲ್ಲಿ 3.7ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶ ಗುಲ್ಬರ್ಗದಿಂದ 79 ಕಿಮೀ ದೂರದಲ್ಲಿದೆ.

ಲಘು ಭೂಕಂಪದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ತಿಳಿಸಿದರು.
ಭೂಕಂಪ ಸಾಧ್ಯತೆ ಇರುವ ಚಿಂಚೋಳಿ, ಆಳಂದದ ವಿವಿಧ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.