ADVERTISEMENT

ಗೊರುಚ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಡಾ. ಬಸ‌ವರಾಜ ನೆಲ್ಲಿಸರ
ಡಾ. ಬಸ‌ವರಾಜ ನೆಲ್ಲಿಸರ   

ಚಿಕ್ಕಮಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ‘ಗೊರುಚ ದತ್ತಿ ನಿಧಿ’ ವತಿಯಿಂದ ನೀಡುವ ಗೊರುಚ ಶರಣ ಪ್ರಶಸ್ತಿಗೆ ಧಾರವಾಡದ ಡಾ.ಗುರುಲಿಂಗ ಕಾಪಸೆ, ಗೊರುಚ ಜಾನಪದ ಪ್ರಶಸ್ತಿಗೆ ಶಿವಮೊಗ್ಗದ ಡಾ.ಬಸವರಾಜ ನೆಲ್ಲಿಸರ ಅವರನ್ನು ಆಯ್ಕೆ ಮಾಡಲಾಗಿದೆ.

ಗೊರುಚ ಗ್ರಂಥ ಪ್ರಶಸ್ತಿಗೆ ಧಾರವಾಡದ ಪ್ರೊ.ಎಚ್‌.ಎಂ.ಬೀಳಗಿ ಅವರ ‘ನಾಮದಲ್ಲಿ ಹೆಂಗೂಸಾದರೂ...’ (ಶರಣ ಸಾಹಿತ್ಯ ಗ್ರಂಥ) ಹಾಗೂ ಬಾದಾಮಿ ತಾಲ್ಲೂಕಿನ ಲಕ್ಕಸಕೊಪ್ಪದ ಪಿ.ಡಿ.ವಾಲೀಕಾರ ಅವರ ‘ಹಳ್ಳಿ ಆಟ’ (ಜಾನಪದ ಸಾಹಿತ್ಯ ಗ್ರಂಥ) ಆಯ್ಕೆಯಾಗಿವೆ. ಗೊರುಚ ಶರಣ ಪ್ರಶಸ್ತಿ ಹಾಗೂ ಗೊರುಚ ಜಾನಪದ ಪ್ರಶಸ್ತಿ ತಲಾ ₹ 25 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ. ಗೊರುಚ ಗ್ರಂಥ ಪ್ರಶಸ್ತಿಯು ₹ 10 ಸಾವಿರ ನಗದು ಪುರಸ್ಕಾರ ಒಳಗೊಂಡಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಶ ಕ್ಯಾತನಬೀಡು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 9ರಂದು ಇಲ್ಲಿನ ಕುವೆಂಪು ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ADVERTISEMENT

ಡಾ.ಗುರುಲಿಂಗ ಕಾಪಸೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.