ADVERTISEMENT

ಗೋಕರ್ಣದಲ್ಲಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST
ಗೋಕರ್ಣದಲ್ಲಿ ಹೆಚ್ಚು ಮಳೆ
ಗೋಕರ್ಣದಲ್ಲಿ ಹೆಚ್ಚು ಮಳೆ   

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಗೋಕರ್ಣದಲ್ಲಿ 10 ಸೆಂ.ಮೀ. ಗರಿಷ್ಠ ಪ್ರಮಾಣದ ಮಳೆಯಾಗಿದೆ.

ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ, ಪಣಂಬೂರಿನಲ್ಲಿ 8, ಕಾರ್ಕಳದಲ್ಲಿ 6, ಮಂಗಳೂರು, ಮೂಡುಬಿದಿರೆಯಲ್ಲಿ 5, ಕುಂದಾಪುರ, ಉಡುಪಿ, ಹೊನ್ನಾವರದಲ್ಲಿ 4, ಧರ್ಮಸ್ಥಳ, ಭಟ್ಕಳ, ಕುಮಟ, ಮಡಿಕೇರಿಯಲ್ಲಿ 3, ಮುಲ್ಕಿ, ಬಂಟ್ವಾಳ, ಬೆಳ್ತಂಗಡಿ, ಕೊಲ್ಲೂರು, ಸಿದ್ಧಾಪುರ, ಕಾರವಾರ, ಕೂಡಲಸಂಗಮ, ಪೊನ್ನಂಪೇಟೆ, ಕೊಟ್ಟಿಗೆಹಾರ, ಕೊಪ್ಪ, ಬಾಗೇಪಲ್ಲಿ, ಗುಡಿಬಂಡೆಯಲ್ಲಿ 2, ಮಾಣಿ, ಪುತ್ತೂರು, ಸುಬ್ರಹ್ಮಣ್ಯ, ಕೋಟ, ಗೇರುಸೊಪ್ಪ, ಅಂಕೋಲ, ಶಿರಸಿ, ಹಾನಗಲ್ಲ, ಹಾವೇರಿ, ವಿರಾಜಪೇಟೆ, ಲಿಂಗನಮಕ್ಕಿ, ಹೊಸನಗರ, ತೀರ್ಥಹಳ್ಳಿ, ಶೃಂಗೇರಿ, ಕಮ್ಮರಡಿ, ಕೊರಟಗೆರೆಯಲ್ಲಿ 1ಸೆಂ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.