ADVERTISEMENT

ಚಿತ್ರರಂಗದ ಸ್ವಾತಂತ್ರ್ಯ ಕಾಯಲು ಮನವಿ

ಬೆಂಗಳೂರು ಸಿನಿಮೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2016, 19:29 IST
Last Updated 28 ಜನವರಿ 2016, 19:29 IST
ಚಿತ್ರರಂಗದ ಸ್ವಾತಂತ್ರ್ಯ ಕಾಯಲು ಮನವಿ
ಚಿತ್ರರಂಗದ ಸ್ವಾತಂತ್ರ್ಯ ಕಾಯಲು ಮನವಿ   

ಬೆಂಗಳೂರು: ಚಿತ್ರನಟರು, ಚಲನಚಿತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಮತ್ತು ಚಿತ್ರ ನಿರ್ಮಾಪಕರು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ರಾಜ್ಯಸಭಾ ಸದಸ್ಯೆ, ಹಿಂದಿ ಚಿತ್ರನಟಿ ಜಯಾ ಬಚ್ಚನ್ ಮನವಿ ಮಾಡಿದರು.

ವಿಧಾನಸೌಧದ ಎದುರು ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಎಂಟನೆಯ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಟರು, ವಿದ್ಯಾರ್ಥಿಗಳು ಮತ್ತು ನಿರ್ಮಾಪಕರು ಸಿನಿಮಾ ಕುರಿತು ಮಾಡುವ ಕೆಲಸಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು. ಇಂಥದ್ದೊಂದು ವಾತಾವರಣ ಸೃಷ್ಟಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರುವೆ’ ಎಂದು ಹೇಳಿದರು.

ಮುಕ್ತವಾಗಿ ಕೆಲಸ ಮಾಡಲು ಈ ವರ್ಗಕ್ಕೆ ಅವಕಾಶ ನೀಡದ ಹೊರತು ಅವರಿಂದ ಉತ್ತಮ ಗುಣಮಟ್ಟದ ಕೆಲಸ ನಿರೀಕ್ಷಿಸಲಾಗದು ಎಂದು ಅವರು ಎಚ್ಚರಿಸಿದರು.

ಜಯಾ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಮ್ಮ ಸರ್ಕಾರ ಯಾವತ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರುತ್ತದೆ. ಸ್ವಾತಂತ್ರ್ಯ ಇಲ್ಲದಿದ್ದರೆ ಕಲೆಯೂ ಇರುವುದಿಲ್ಲ’ ಎಂದರು.

ಸಿನಿಮಾ ಕ್ಷೇತ್ರವು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳನ್ನು  ನಿರ್ಮಿಸಬೇಕು.  ಚಿತ್ರರಂಗ ತಂತ್ರಜ್ಞಾನದ ಬೆಂಬಲ ಇಲ್ಲದಿದ್ದ ಕಾಲದಲ್ಲೂ ಒಳ್ಳೆಯ ಚಿತ್ರ ನಿರ್ಮಿಸಿದೆ. ಇಂದು ಪ್ರತಿಭೆ, ತಂತ್ರಜ್ಞಾನ, ಹಣದ ಕೊರತೆ ಇಲ್ಲ. ರಕ್ತಪಾತದ ಸಿನಿಮಾಗಳು ಬೇಡ ಎಂದರು.
*
‘ಇಲ್ಲಿಗೆ ಬರಲು ಹೇಳುವೆ’
ಬೆಂಗಳೂರು:
‘ನಮ್ಮ ಕುಟುಂಬದ ಸದಸ್ಯರು ಬೆಂಗಳೂರಿಗೆ ಬಂದಾಗಲೆಲ್ಲ ಏನೋ ಕೆಟ್ಟದ್ದು ಆಗಿದೆ. ಆದರೆ, ಈ ಬಾರಿ ಹಾಗಾಗಿಲ್ಲ’ ಎಂದು ಜಯಾ ಬಚ್ಚನ್ ಸಂತಸ ಹಂಚಿಕೊಂಡರು.

‘ಮತ್ತೆ ಬೆಂಗಳೂರಿಗೆ ಹೋಗಿ, ಅಲ್ಲಿ ಒಂದು ಸಿನಿಮಾ ಚಿತ್ರೀಕರಿಸಲು  ನನ್ನ ಪತಿಗೆ (ಅಮಿತಾಭ್ ಬಚ್ಚನ್) ಹೇಳುವೆ’ ಎಂದಾಗ ಸಭಿಕರಿಂದ ಕರತಾಡನ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.